ಕಾಂಗ್ರೆಸ್ ನವರು ಮಾಡಿದ ಸಾಲದ ಹೊರೆಯನ್ನು ತೀರಿಸುವ ಸಲುವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ, ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯ ವಿಧಾನ ಮಂಡಲದ ಎರಡನೇ ದಿನದ ಕಾರ್ಯಾಕಲಾಪದಲ್ಲಿ ಮಾತನಾಡಿದ ಅವರು ಇದು ಸಂಕಷ್ಟದ ಸಮಯ, ಆದ್ದರಿಂದ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಕೊಂಚ ಮಟ್ಟದ ಏರಿಕೆಯನ್ನು ಕಂಡಿದೆ. ಬೆಲೆ ಏರಿಕೆ ತಾತ್ಕಾಲಿಕ, ಈ ಕುರಿತು ನಾಗರೀಕರು ಸಂಶಯ ಪಡಬಾರದು, ನಿಶ್ಚಿಂತೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
ದೇಶದಲ್ಲಿ ದಾಖಲೆ ಮಟ್ಟದ ವಿದೇಶಿ ವಿನಿಮಯ ನಡೆಯುತ್ತಿದೆ,ದೇಶದ ಭದ್ರತೆ ಹಾಗೂ ಮುಂದಿನ ಭವಿಷ್ಯದ ಬಗ್ಗೆ ಯಾವುದೇ ಆತಂಕ ಬೇಡ. ಆದರೆ ಕಾಂಗ್ರೆಸ್ ಪಕ್ಷದ ಕೆಲವರಿಗೆ ಭವಿಷ್ಯದ ಬಗ್ಗೆ ಈಗಲೇ ಆತಂಕ ಶುರುವಾಗಿದೆ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಬೆಲೆ ಏರಿಕೆಯ ವಿರುದ್ಧದ ಹೋರಾಟಕ್ಕೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಸಿಟಿ ರವಿ, ಪ್ರತಿಭಟಿಸುವ ನೈತಿಕತೆಯೇ ಕಾಂಗ್ರೆಸ್ ನವರಿಗೆ ಇಲ್ಲ. ಶೋ ಕೊಡಲು ಒಂದು ದಿನ ಎತ್ತಿನ ಗಾಡಿಯಲ್ಲಿ ಬರುತ್ತಾರೆ, ಬೆಲೆ ಏರಿಕೆ ಕೇವಲ ಭಾರತದಲ್ಲಿ ಆಗುತ್ತಿಲ್ಲ, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆ ಉಂಟಾಗಿದೆ ಎಂದರು.



0 Comments