ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ರೈತರ ಒಳಿತಿಗಾಗಿ ಅವರ ಬಳಕೆಗಾಗಿ ಇರುವ ಸೊಪ್ಪಿನ ಬೆಟ್ಟವನ್ನು ಮಂಜೂರು ಮಾಡಲು ಸಾಧ್ಯವಿಲ್ಲ, ಸರ್ಕಾರ ಈ ಕುರಿತು ಲಿಖಿತ ರೂಪದ ಪ್ರತಿ ನೀಡಿದೆ ಎಂದು ಶಾಸಕ ಟಿ.ಡಿ ರಾಜೇಗೌಡ ಮಾಹಿತಿ ನೀಡಿದರು.
ಈ ಹಿಂದಿನ ಅಧಿವೇಶನದಲ್ಲಿ ಕಂದಾಯ ಸಚಿವರಿಗೆ ಫಾರಂ ನಂಬರ್ 50, 94 ಸಿ, 94 ಸಿಸಿ, 53. ಗೋಮಾಳ, ಸೊಪ್ಪಿನ ಬೆಟ್ಟದ ಜಾಗ ಮಂಜೂರಾತಿಗೆ ಇರುವ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಪರಿಹರಿಸಿಕೊಡುವಂತೆ ಮನವಿ ಮಾಡಲಾಗಿತ್ತು, ಸಚಿವರೂ ಈ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದರು ಆದರೆ ಈ ಅಧಿವೇಶನದಲ್ಲಿ ಜಾಗ ಮಂಜೂರು ಮಾಡಲು ಸಾಧ್ಯವಿಲ್ಲ ಅದಕ್ಕೆ ಅವಕಾಶವಿಲ್ಲ ಎಂಬ ಉತ್ತರವನ್ನು ನೀಡಿದ್ದಾರೆ ಎಂದು ಶಾಸಕ ಟಿ.ಡಿ ರಾಜೇಗೌಡ ತಿಳಿಸಿದರು.
ರೈತರ ಬದುಕನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲುವಾಗಿ ಸರ್ಕಾರ ಹೊರಟಿದೆ. ಮಲೆನಾಡಿನ ಭಾಗಗಳಲ್ಲಿ 94 ಸಿ, 94 ಸಿಸಿ, ಕುರಿತಾದ ಸಮಸ್ಯೆಗಳು ಬಹಳಷ್ಟಿವೆ ಈ ಕುರಿತು ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯಗಳನ್ನು ತೆಗೆದುಕೊಂಡು ನಂತರ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.




0 Comments