ಶಿವಮೊಗ್ಗ : ಪಾಪಿ ಮಗನೊಬ್ಬ ಕುಡಿದ ಮತ್ತಿನಲ್ಲಿ ತನ್ನ ನಿಯಂತ್ರಣವನ್ನು ಕಳೆದುಕೊಂಡು ಹೆತ್ತವರೊಂದಿಗೆ ಜಗಳವಾಡಿ, ತನ್ನ ತಾಯಿಯನ್ನು ಕೊಂದ ದುರ್ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ಮೃತಪಟ್ಟ ಮಹಿಳೆಯನ್ನು ಬುಳ್ಳಾಪುರದ ನಿವಾಸಿ ವನಜಾಕ್ಷಿ ಎಂದು ಗುರುತಿಸಲಾಗಿದೆ. ಈ ಕುಟುಂಬದಲ್ಲಿ ಮೂರು ಜನರಿದ್ದು, ಕೂಲಿ ಕೆಲಸವೇ ಇವರ ಬದುಕಿಗೆ ಆಸರೆಯಾಗಿತ್ತು. ಪ್ರತಿನಿತ್ಯವೂ ಕೆಲಸಕ್ಕೆ ಹೋಗಿ ಬಂದ ನಂತರ ಕುಡಿದು ಗಲಾಟೆ ಮಾಡುವುದೇ ಮಗ ದೇವರಾಜನ ಕೆಲಸವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈತ ಕುಡಿತದ ಅಮಲಿನಲ್ಲಿ ಮನೆಗೆ ಬಂದು ತಾಯಿಯ ಜೊತೆ ಜಗಳ ಮಾಡಿದ್ದಾನೆ. ಜಗಳ ಇನ್ನಷ್ಟು ತಾರಕಕ್ಕೇರಿ ತಾಯಿ ವನಜಾಕ್ಷಿ ಅವರು ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ತಾಯಿಯು ಕುತ್ತಿಗೆಯ ಮೇಲೆ ಮಗನು ಜೋರಾಗಿ ತುಳಿದಿದ್ದಾನೆ. ಈ ಪರಿಣಾಮ ವನಜಾಕ್ಷಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಗನ ವಿರುದ್ಧ ತಂದೆ ಲೋಕೇಶ್ ನಾಯ್ಕ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣವು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.



0 Comments