ಚಿಕ್ಕಮಗಳೂರು : ಇಡೀ ಮಲೆನಾಡು ತಲ್ಲಣಗೊಳ್ಳುವಂತಹ ಭೀಕರ ಘಟನೆಯೊಂದು ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. 

ಹೆತ್ತ ಮಗನೇ ಮಚ್ಚಿನಿಂದ ತಾಯಿಯನ್ನು ಕೊಚ್ಚಿ ಹಾಕಿ ಹೆಣದ ಪಕ್ಕ ಕುಳಿತಿದ್ದ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ನಡೆದಿದೆ. ಕೊಲೆಗೈದ ಪುತ್ರನನ್ನು ದುಷ್ಯಂತ್ ಎಂದು ಗುರುತಿಸಲಾಗಿದೆ.  ಮಧ್ಯಾಹ್ನದ ವೇಳೆಗೆ ಕೊಲೆ ಮಾಡಿರುವ ಶಂಕೆ  ವ್ಯಕ್ತವಾಗಿದೆ. ಸಂಜೆಯ ವೇಳೆ ಇನ್ನೊಬ್ಬ ಪುತ್ರ ಮನೆಗೆ ಬಂದಾಗ ಈ ಕೊಲೆಯ ಕೃತ್ಯ ಬೆಳಕಿಗೆ ಬಂದಿದೆ. 

ಕೆಲವೊಮ್ಮೆ ಮಾನಸಿಕ ಅಸ್ವಸ್ಥ ನಂತೆ ವರ್ತಿಸುತ್ತಿದ್ದ ದುಷ್ಯಂತ್, ಯಾವ ಕಾರಣದಿಂದಾಗಿ ತಾಯಿ ಸುಧಾ ಅವರನ್ನು ಹತ್ಯೆಗೈದಿದ್ದಾನೆ ಎಂಬುದು ತನಿಖಾ ನಂತರದಲ್ಲಿ ತಿಳಿಯಬೇಕಿದೆ.ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.