ಬೆಂಗಳೂರು : ( ನ್ಯೂಸ್ ಮಲ್ನಾಡ್ ವರದಿ) ವಿದೇಶಿ  ಮೆಷಿನರಿಗಳ ವ್ಯವಸ್ಥಿತ ಪಿತೂರಿಯಿಂದ ರಾಜ್ಯದಲ್ಲಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಹಾಗೂ ಅವರು ಹೆಚ್ಚಾಗಿ ವಾಸಿಸುವ ಪ್ರದೇಶಗಳನ್ನು ಗುರುತಿಸಿ ವ್ಯವಸ್ಥಿತವಾಗಿ ಮತಾಂತರ ಮಾಡಲಾಗುತ್ತಿದೆ, ವಿದೇಶಿ ಶಕ್ತಿಗಳು ಇಲ್ಲಿನ ಸಂಘಟನೆಗಳನ್ನು ಬಳಸಿಕೊಂಡು ದಾಳವನ್ನು ಹೂಡುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಇದರಿಂದ ಸಮಾಜದ ಶಾಂತಿ ಕೆಡುವ ಸಾಧ್ಯತೆಯಿದೆ ಎಂದು ವಿರಾಜಪೇಟೆ ಶಾಸಕರಾದ ಕೆ.ಜಿ ಬೋಪಯ್ಯ ಅವರು ಇಂದಿನ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು‌. ಮತಾಂತರ ನಿಯಂತ್ರಣ ಮಾಡಲು  ಬಿಗಿಯಾದ ಕಾನೂನು ತರಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ ಗೂಳಿಹಟ್ಟಿ ಶೇಖರ್ ಅವರು ತಮ್ಮ ಮನೆಯಲ್ಲಿ ತಾಯಿ ಮತಾಂತರ ಹೊಂದಿರುವ ಕುರಿತು ನೋವು ತೋಡಿಕೊಂಡರು.