ಶೃಂಗೇರಿ : ಮೈಸೂರಿನ ಹುಚ್ಚ ಗಣಿ ಮಹಾದೇವಮ್ಮ ದೇವಾಲಯವನ್ನು ರಾತ್ರೋರಾತ್ರಿ ಒಡೆದ ವಿಚಾರವನ್ನು ಖಂಡಿಸಿ ಹಾಗೂ ರಾಜ್ಯದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುವಂತಹ ಕೆಲಸಗಳನ್ನು ರಾಜ್ಯ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಒಗ್ಗೂಡಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದೆಂದು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ದೇವಾಲಯ ತೆರವು ಕಾರ್ಯಗಳನ್ನು ನಿಲ್ಲಿಸಿ ಧ್ವಂಸ ಮಾಡಿದ ದೇವಾಲಯವನ್ನು ಪುನಃ ನಿರ್ಮಾಣಕ್ಕೆ ಶೀಘ್ರ ಆದೇಶ ಹೊರಡಿಸಬೇಕು ಇಲ್ಲವಾದಲ್ಲಿ 1992 ರ ಇತಿಹಾಸವನ್ನು ಮತ್ತೆ ಮರುಕಲಿಸಬೇಕಾಗುತ್ತದೆ. ಶಶಾಂಕ್ ಗೌಡ ಹೇರೂರು.ಚಿಕ್ಕಮಗಳೂರು ಬಜರಂಗದಳ ಜಿಲ್ಲಾ ಸಂಚಾಲಕ.
ಸುಪ್ರೀಂಕೋರ್ಟ್ ನ ಆದೇಶ ಎಂದು ಬರೀ ದೇವಾಲಯಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ರಾತ್ರೋರಾತ್ರಿ ತುಘಲಕ್ ರಂತೆ ಧ್ವಂಸ ಮಾಡುತ್ತಿರುವುದು ಸರಿಯಲ್ಲ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಎಂದಿಗೂ ಸಹ ನೋವುಂಟಾಗದಂತೆ ಕ್ರಮ ತೆಗೆದುಕೊಳ್ಳುವುದು ಬಿಜೆಪಿ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.
ರಾಜ್ಯದ ಹಿಂದೂಗಳಿಗೆ ಮತ್ತು ಅವರ ಭಾವನೆಗಳಿಗೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಅತೀವ ನೋವು ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಗಮನಹರಿಸಿ ದೇವಾಲಯದ ಪುನರ್ ನಿರ್ಮಾಣ ಕಾರ್ಯ ನಡೆಯದೆ ಇದ್ದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವು ಮುಂದಿನ ಹೋರಾಟ ನಡೆಸಲು ಸಿದ್ಧವಿದೆ. ರವಿಸಂಜಯ್, ತಾಲೂಕು ಸಂಚಾಲಕರು ಬಜರಂಗದಳ ಶೃಂಗೇರಿ ತಾಲೂಕು.
ಈ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಹಾಗೂ ಬಿಜೆಪಿ ಯುವಮೋರ್ಚಾ ದ ಕಾರ್ಯಕರ್ತರು ಹಾಜರಿದ್ದರು.


0 Comments