ಚಿಕ್ಕಮಗಳೂರು : ಚಿಕ್ಕಮಗಳೂರಿನ ಸಗನೀಪುರ ಗ್ರಾಮದಲ್ಲಿ ಇಂದು ಶಾಸಕ ಸಿ.ಟಿ ರವಿ ಅವರು ಹೊಲದ ಉಳುಮೆ ಮಾಡಿದ್ದಾರೆ.

ಕೆರೆ ಏರಿ ಕಾಮಗಾರಿಯ ವೀಕ್ಷಣೆಗೆ ಹೋದಾಗ ರೈತರನ್ನು ಕಂಡ ಶಾಸಕ ಸಿ.ಟಿ ರವಿ ಕೂಡಲೇ ಹೊಲಕ್ಕೆ ತೆರಳಿ ರೈತರು ಉಳುಮೆ ಮಾಡುವಂತೆ ನೇಗಿಲನ್ನು ಕಾಲಲ್ಲಿ ಒತ್ತಿ, ಹೊಲದ ಉಳುಮೆ ಮಾಡಿದ್ದಾರೆ.

ಹಿರೇಮಗಳೂರಿನ ಕೆರೆ ಏರಿ ಕಾಮಗಾರಿ ವೀಕ್ಷಿಸುವ ಸಂಧರ್ಭದಲ್ಲಿ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ರೈತರಿಂದ ಎತ್ತುಗಳನ್ನು ಪಡೆದು, ಉಳುಮೆ ಮಾಡಿದ್ದಾರೆ.

ಈ ಹಿಂದೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಯುವಜನತೆಯನ್ನು ಕೃಷಿ ಕ್ಷೇತ್ರದತ್ತ  ಪ್ರೇರೇಪಿಸಲು ಗದ್ದೆ ನಾಟಿಯನ್ನು ಮಾಡಿ ಯುವಕರಿಗೆ ಕರೆ ನೀಡಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಹ ಸಸಿಗಳನ್ನು ನಾಟಿ ಮಾಡಿ, ರೈತರನ್ನು ಉತ್ತೇಜಿಸಿದರು.