ಹಾಸನ : ಜಗತ್ತಿಗೇ ಆಫ್ಘಾನಿಸ್ತಾನ ಮಾರಕವಾಗಲಿದೆ ಎಂದು ಕೋಡಿ ಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗ್ರಾಮದಲ್ಲಿ ಆಯೋಜಿಸಿದ್ದ ಗೌರಿ ಪೂಜೆಗೆ ಆಗಮಿಸಿದ್ದ ಶ್ರೀಗಳು, ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಇನ್ನೂ ಭೀಕರವಾಗಿ ಮಳೆಯಾಗಲಿದೆ, ಕಾರ್ತಿಕ ಮಾಸದವರೆಗೂ ವಿಪತ್ತು ತಪ್ಪಿದ್ದಲ್ಲ, ಹಲವೆಡೆ ಭೂಮಿ ನಡುಗಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ ದೇಶದ ಭೂಪಟದಿಂದ ಒಂದು ದೇಶ ನಶಿಸಿ ಹೋಗುತ್ತದೆ ಎಂದು ಹೇಳಿದ್ದೆ, ಈಗ ಅದೇ ಸಂದರ್ಭ ಎದುರಾಗಿದೆ ಎಂದರು.ಅಫ್ಘಾನಿಸ್ತಾನದಿಂದ ಇಡೀ ದೇಶಕ್ಕೆ ಸಂಚಕಾರ ಇದೆ, ಇದರ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಕೊರೋನ ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಹಬ್ಬುತ್ತದೆ, ಎರಡು ವರ್ಷಗಳ ಕಾಲ ಅದು ರೂಪಾಂತರಿಯಾಗಿ ಇನ್ನಷ್ಟು ಸಾವು ನೋವು ಉಂಟುಮಾಡಲಿದೆ ಎಂದರು.

ರಾಜ್ಯದ ರಾಜಕಾರಣದ ಬಗ್ಗೆ ಭವಿಷ್ಯ  ನುಡಿದ ಕೋಡಿ ಶ್ರೀಗಳು, ಸರ್ಕಾರ ಸುಭದ್ರವಾಗಿ ಆಡಳಿತ ನಡೆಸುತ್ತದೆ, ಅದರ ಹಿಂದೆ ರಾಜಕೀಯದ ಸೂತ್ರಧಾರಿ ಇದ್ದಾರೆ ಎಂದರು. ಬೊಮ್ಮಾಯಿ ನೇತೃತ್ವದ ನೂತನ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ  ಎಂದು ಸರ್ಕಾರದ ಬಗ್ಗೆ ಭವಿಷ್ಯ ಹೇಳಿದ್ದಾರೆ.