ಕಳಸ : ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಬಸ್ ಸೇವೆ ಕಲ್ಪಿಸಲು ಕೆಕೆಬಿ ಸಾರಿಗೆ ಸಂಸ್ಥೆಗೆ ಮನವಿ ಸಲ್ಲಿಸಿದ ಬಿಜೆಪಿ ಯುವಮೋರ್ಚಾ.

ಮಲೆನಾಡಿನ ಪ್ರತಿಷ್ಠಿತ  ಸಾರಿಗೆ ಸಂಸ್ಥೆ ಕಳಸದ ಕೆಕೆಬಿ ಸಾರಿಗೆ ಸಂಸ್ಥೆಯ ಕಚೇರಿಗೆ, ಬಿಜೆಪಿ ಯುವಮೋರ್ಚಾ ತಂಡ ಇಂದು ಭೇಟಿ ನೀಡಿದೆ. ಮಲೆನಾಡು ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಹಲವು ಭಾಗಗಳಲ್ಲಿ ಸರ್ಕಾರಿ ಬಸ್ ಸೇವೆ ಇಲ್ಲದಿರುವುದರಿಂದ, ಕೆ ಕೆ ಬಿ ಸಾರಿಗೆ ನಂಬಿರುತ್ತಾರೆ, ಶಾಲೆಗಳು ಹಾಗೂ ಉದ್ಯೋಗ ಸಾಮಾನ್ಯವಾಗಿ ಆರಂಭವಾಗಿರುವುದರಿಂದ ಕೋರೋನಾಗಿಂತಾ ಮೊದಲು ಇದ್ದ ಬಸ್ ರೂಟ್ ಬಿಡಬೇಕು, ತುರ್ತಾಗಿ ಕೊಟ್ಟಿಗೆಹಾರ ದಿಂದ ನಿಡುವಾಳೆ ಕಡೆಗೆ  ತಕ್ಷಣ ಬಸ್ ನೀಡುವಂತೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ.

ಈ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿದ ಮಾಲೀಕರು  ತಕ್ಷಣವೇ ಬಸ್ ಬಿಡಲು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಮಲೆನಾಡಿನ ಯಾವುದಾದರೂ ಸಾರಿಗೆ ರೂಟ್ ನಲ್ಲಿ ಬಸ್ ಬೇಕಾದರೆ ಆ ಭಾಗಕ್ಕೆ  ಹಾಗೂ ಮಲೆನಾಡಿನಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಸಾರಿಗೆ ಸೇವೆ ನೀಡುತ್ತೇವೆ ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದ ಸಂಜಯ್ ಗೌಡ, ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಸಂದೀಪ್ ಹರವಿನಗಂಡಿ, ನವೀನ್ ಹಾವಳಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಅವಿನಾಶ್ ಜನ್ನಾಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸಚಿನ್ ಮತ್ತು ಆದರ್ಶ, ಪ್ರಧಾನ ಕಾರ್ಯದರ್ಶಿಯಾದ ಚಿರಾಗ್ ಕೊಟ್ರುಕೆರೆ, ನಂದನ್ ಇದ್ದರು.