ಚಿಕ್ಕಮಗಳೂರು : ತಾಲೂಕಿನ ಕಮೇನಹಳ್ಳಿ ಅರಣ್ಯ ಪ್ರದೇಶದಲ್ಲಿ ರಾತ್ರಿ ಬೀಡು ಬಿಟ್ಟು ಗಂಧದ ಮರಗಳನ್ನು ಕಡಿದು ಸಾಗಿಸುವ ಕಳ್ಳರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ರಾತ್ರಿ ಯಾರು ಒಡಾಡದ ಸಮಯದಲ್ಲಿ ತನ್ನ ಕೈ ಚಳಕ ತೋರುವ ಈ ಗಂಧ ಕಳ್ಳನನ್ನು ತಮಿಳುನಾಡು ಮೂಲದ ರಮೇಶ್ ಎಂದು ಗುರುತಿಸಲಾಗಿದೆ. ಈತನ ಜೊತೆಗೆ ಇನ್ನೂ ಮೂವರು ತಮಿಳುನಾಡು ಮತ್ತು ಆಂಧ್ರಪ್ರದೇಶದ ವ್ಯಕ್ತಿಗಳು ಇದ್ದರು ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುವ ವೇಳೆಗೆ ಗಂಧ ಚೋರರು ಅರಣ್ಯದಲ್ಲಿ ತಪ್ಪಿಸಿ ಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಳ್ಳರಿಂದ ಪೊಲೀಸರು 20 ಕೆಜಿ ಗಳಷ್ಟು ಶ್ರೀಗಂಧವನ್ನು ವಶ ಪಡಿಸಿಕೊಂಡಿದ್ದಾರೆ.
ಈ ಕಳ್ಳರ ತಂಡವು ವ್ಯವಸ್ಥಿತವಾಗಿ ಶ್ರೀಗಂಧದ ಸಾಗಾಣಿಕೆಯಲ್ಲಿ ತೊಡಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಗಂಧ ಚೋರರಿಗಾಗಿ ಪೊಲೀಸರು ಬಲೆ ಬೀಸಿದ್ದು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಮುಂದಿನ ದಿನಗಳಲ್ಲಿ ಕಳ್ಳರನ್ನು ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸ್ವಾತಿ, ಸಿಬ್ಬಂದಿಗಳಾದ ವಸಂತ, ನಂದೀಶ್,. ಸುನಿಲ್, ಮೊಹಮ್ಮದ್ ಇದ್ದರು.



0 Comments