ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ದ ತಹಶೀಲ್ದಾರ್ ಗೀತಾ ಅವರು ವಿವಾಹಿತ ಗ್ರಾಮಲೆಕ್ಕಿಗ ಡಿ.ಟಿ ಶ್ರೀನಿಧಿ ಎಂಬುವವರನ್ನು ಮದುವೆಯಾಗಿದ್ದಾರೆ. 

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಿ.ಜಿ ಗೀತಾ ಅವರಿಗೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅವರು ಷೋ ಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ನೋಟಿಸ್ ತಲುಪಿದ ಏಳು ದಿನಗಳೊಳಗೆ ಸೂಕ್ತ ಕಾರಣಗಳನ್ನು ನೀಡದೆ ಇದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದೂ ಸಹ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ದೂರು ನೀಡಿದ ಪತ್ನಿ : 

2006 ರಲ್ಲಿ ಶ್ರೀನಿಧಿಯವರೊಂದಿಗೆ ನನ್ನ ಮದುವೆಯಾಗಿತ್ತು,ನಮಗೆ ಇಬ್ಬರು ಮಕ್ಕಳಿದ್ದಾರೆ, ಸಣ್ಣ ಪುಟ್ಟ ಸಮಸ್ಯೆಗಳು ನಮ್ಮ ಮಧ್ಯದಲ್ಲಿತ್ತು,  

ಮಾನಸಿಕ, ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಆ ಕಾರಣದಿಂದಾಗಿ ಈ ಹಿಂದೆ ಕಡೂರು ಠಾಣೆಯಲ್ಲಿ ದೂರು ನೀಡಿದ್ದೆ. ಅಲ್ಲಿನ ಪೊಲೀಸರು ನಮ್ಮನ್ನು ರಾಜಿ ಮಾಡಿದ್ದರು ಎಂದು ಶ್ರೀನಿಧಿ ಅವರ ಪತ್ನಿ  ತಿಳಿಸಿದ್ದಾರೆ. ಹಾಗೂ ಶ್ರೀನಿಧಿ ಅವರು ವಿವಾಹ ವಿಚ್ಛೇದನ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.