ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದ ಆಶಾ ಎಂಬುವವರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಆಶಾ ರವರು ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಕಂದಾಯ ಇಲಾಖೆ ಸಿಬ್ಬಂದಿವರ್ಗದವರು ಸೇರಿದಂತೆ ಎಲ್ಲಾ ಕೊರೋನಾ ವಾರಿಯರ್ಸ್ ಗೆ ಊಟವನ್ನು ಪೂರೈಸಿದ್ದರು, ಇದಕ್ಕೆ ಪ್ರತಿಯಾಗಿ ಸರ್ಕಾರ ಪ್ರತೀ ತಿಂಗಳು ಹಣವನ್ನು ನೀಡಿತ್ತು. ಆದರೆ ಕಳೆದ ತಿಂಗಳಿನಿಂದ 43,000 ಬಿಲ್ ಮೊತ್ತ ಬರಲು ಬಾಕಿಯಿದೆ, ಇದರಿಂದ ಹೋಟೆಲ್ ನಡೆಸಲು ಹಣವಿಲ್ಲದೆ ಹೋಟೆಲ್ ಮುಚ್ಚುವ ಸ್ಥಿತಿಗೆ ಬಂದಿದೆ, ಸ್ಥಳೀಯ ಗ್ರಾಮಪಂಚಾಯಿತಿ ಗ್ರಾಮಲೆಕ್ಕಿಗರಾಗಿರುವ ಉಷಾರವರು ಬಿಲ್ ಹಣವನ್ನು ನೀಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳ ಈ ವರ್ತನೆಗೆ ಶಿರಂಗಾಲ ಗ್ರಾಮಸ್ಥರು ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.



0 Comments