ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬಜರಂಗದಳದ ಕಾರ್ಯಕರ್ತರು ಇಂದು ಹುಣ್ಣಿಮೆಯ ಅಂಗವಾಗಿ ದತ್ತ ಪೀಠಕ್ಕೆ ತೆರಳಿ ಶ್ರೀ ಗುರು ದತ್ತಾತ್ರೇಯರ ಪಾದುಕೆ ದರ್ಶನವನ್ನು ಪಡೆದರು.
ನೆರೆದಿದ್ದ ಶೃಂಗೇರಿ ಭಾಗದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪಾದುಕೆಯ ಎದುರು ಶೀಘ್ರದಲ್ಲಿ ಹಿಂದೂ ಅರ್ಚಕರ ನೇಮಕ ಆಗಬೇಕು ಎಂದು ಸಂಕಲ್ಪ ಮಾಡಿದರು.
ಹಲವಾರು ವರ್ಷಗಳಿಂದ ವಿವಾದವಾಗಿಯೇ ಉಳಿದಿರುವ ಈ ಜಾಗವನ್ನು ಹಿಂದೂಗಳ ಭೂಮಿ ಎಂದು ಸರ್ಕಾರ ಘೋಷಣೆ ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದರು.
ಪ್ರತೀ ತಿಂಗಳಿನಂತೆ ಈ ಬಾರಿಯ ಹುಣ್ಣಿಮೆ ಪೂಜೆಗೆ ಶೃಂಗೇರಿ ಘಟಕದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ದತ್ತ ಪೀಠಕ್ಕೆ ತೆರಳಿ ಪೂಜೆ ಸಲ್ಲಿಸಿ ಪಾದುಕೆ ದರ್ಶನ ಪಡೆದು ಹಿಂದಿರುಗಿದರು.
ಈ ಸಂದರ್ಭದಲ್ಲಿ ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕರಾದ ರಘು ಸಕಲೇಶಪುರ, ಬಜರಂಗದಳದ ಸಹ ಕಾರ್ಯದರ್ಶಿ ರಂಗನಾಥ್, ಬಜರಂಗದಳದ ಹಿರಿಯ ಮುಖಂಡರಾದ ಹರೀಶ್ ವಿ ಶೆಟ್ಟಿ, ತಾಲೂಕು ಸಂಚಾಲಕ ರವಿಸಂಜಯ್ ಪೂಜಾರಿ, ಸಹಸಂಚಾಲಕ ಕಾವಡಿ ಪ್ರವೀಣ್, ನಗರ ಸಂಚಾಲಕ ಸಂತೋಷ್ ಕೆರೆಮನೆ, ಸಂಘಟನೆಯ ಮುಖಂಡರಾದ ನಾಗೇಶ್ ಶೆಟ್ಟಿ ಹಾಗೂ ಇನ್ನಿತರ ಬಜರಂಗದಳದ ಕಾರ್ಯಕರ್ತರು ಹಾಜರಿದ್ದರು.


0 Comments