ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಒಳಪಡುವ ಆಗುಂಬೆ ಘಾಟಿಯಲ್ಲಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ.
ಆಗುಂಬೆ ಘಾಟಿಯ ಮೊದಲ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಐದು ಮಂದಿ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸದೇ ಸುರಕ್ಷಿತವಾಗಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಕಾರು ಬೆಂಕಿಯಲ್ಲಿ ಉರಿದಿದೆ.
ಈ ದೃಶ್ಯವನ್ನು ಹಲವಾರು ಪ್ರವಾಸಿಗರು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಪ್ರವಾಸಿಗರು ಮಾಡಿ ಹರಿಯ ಬಿಟ್ಟ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಇಂಜಿನ್ ಹೀಟ್ ಆಗಿರುವುದು ಕಾರಣ ಇರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಸ್ಪಷ್ಟ ಕಾರಣಗಳೇನು ಎಂದು ಈವರೆಗೆ ತಿಳಿದಿಲ್ಲ.


0 Comments