ಶೃಂಗೇರಿ ಪಟ್ಟಣದಲ್ಲಿ ಸುಗಮವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ನಾಗರೀಕರು ಮನವಿ ಸಲ್ಲಿಸಿದ್ದಾರೆ.

ಶೃಂಗೇರಿ ಪಟ್ಟಣ ಪಂಚಾಯ್ತಿ  ವ್ಯಾಪ್ತಿಗೆ ಹೊಂದಿಕೊಂಡಿರುವ ಮುಖ್ಯರಸ್ತೆಯಿಂದ, ಶೃಂಗೇರಿಯ ಪ್ಯಾರಲಲ್ ರಸ್ತೆಯ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ಕಟ್ಟಡ ಕೆಲಸದ ಕೆಲ ಸಾಮಾಗ್ರಿಗಳನ್ನು ಮತ್ತು ಸಾರ್ವೆಯನ್ನು ಹಾಕಿಕೊಂಡಿರುವುದರಿಂದ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡಲು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಸರಿಯಾದ ರೀತಿಯಲ್ಲಿ ವಾಹನ ಸಂಚಾರ ಮಾಡಲಾಗುತ್ತಿಲ್ಲ ಹಾಗೂ  ಕಟ್ಟಡದ ನಿರ್ಮಾಣದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆಯೇ ಕೆಲಸ ನಡೆಯುತ್ತಿದೆ. ಶೀಘ್ರವಾಗಿ ಕಟ್ಟಡದ ನಿರ್ಮಾಣಗಾರರಿಗೆ ಹಾಗೂ ಮಾಲೀಕರಿಗೆ ಈ ಕುರಿತು ತಿಳುವಳಿಕೆ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅರ್ಜಿ ನೀಡಲಾಗಿದೆ.