ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯರ ಮೋಜು ಮಸ್ತಿ ಕಂಡು ಹಿಂದೂ ಪರ ಸಂಘಟಕರು ತಡೆದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಕೇಸ್ ದಾಖಲಾಗಿದೆ.
ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಗರದ ಖಾಸಗಿ ಕಾಲೇಜಿನ ಯುವಕ, ಯುವತಿಯರ ತಂಡ ತಾಲೂಕಿನ ಹಿರೇಕೊಳಲೆಗೆ ತೆರಳಿ ಅಲ್ಲಿಂದ ಮುಳ್ಳಯ್ಯನಗಿರಿಗೆ ತೆರಳುತ್ತಿರುವ ಸಮಯದಲ್ಲಿ, ಸಂಘಪರಿವಾರದ ಯುವಕರ ಗುಂಪೊಂದು ಮಸ್ತಿಯಲ್ಲಿದ್ದದನ್ನು ನೋಡಿ ಯುವಕರು ಅಡ್ಡಗಟ್ಟಿ ಪ್ರಶ್ನಿಸಿದ್ದಾರೆ. ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಅನ್ಯಕೋಮಿನ ಯುವಕರೊಂದಿಗೆ ಯುವತಿಯರು ಪ್ರವಾಸಕ್ಕೆ ತೆರಳಿರುವುದು ಈ ಘಟನೆಗೆ ಮೂಲಕಾರಣವೆಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಹಲ್ಲೆಗೊಳಗಾಗಿರುವ ಯುವಕರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣದ ಸಂಬಂಧ ಹಿಂದೂ ಸಂಘದ ಮುಖಂಡ ಸಂತೋಷ್ ಕೋಟ್ಯಾನ್ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.



0 Comments