ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಆನೆಗಳನ್ನು ಓಡಿಸಲು ಹೋದ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ.

ಯಶವಂತ್ ಎಂಬ ಬೈರಾಪುರ ದ 50 ವರ್ಷದ  ವ್ಯಕ್ತಿ ನಿನ್ನೆ ರಾತ್ರಿ ಜಮೀನಿಗೆ ಬಂದಿದ್ದ ಆನೆಗಳನ್ನು ಓಡಿಸಲು ಓಡಿಸಲು ಹೋಗಿದ್ದರು ಎಂದು ಮನೆಯವರು ತಿಳಿಸಿದ್ದಾರೆ. ರಾತ್ರಿ ಆನೆಗಳನ್ನು ಓಡಿಸಲು ಹೋದ ಯಶವಂತ್ ಎಷ್ಟು ಹೊತ್ತಾದರೂ ಮನೆಗೆ ಬಾರದ್ದನ್ನು ಕಂಡ ಮನೆಯವರು ಕಂಗಾಲಾಗಿ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. 

ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಕೂಡ  ಅವರು ಸ್ಪಂದಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಇಲಾಖೆಯ ಅಧಿಕಾರಿಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾದ ಯಶವಂತ್ ಅವರನ್ನು ಆದಷ್ಟು ಬೇಗ ಹುಡುಕಿ ಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.