ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಪಟ್ಟಣ ಪಂಚಾಯಿತಿ ಸದಸ್ಯನೊಬ್ಬ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ಇಂದು ಶೃಂಗೇರಿ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ನಡೆದಿದೆ.

ಪಟ್ಟಣದ ಮೊದಲನೆ ವಾರ್ಡಿನ ಸದಸ್ಯ ರಫೀಕ್ ಅಹಮದ್, ಪಟ್ಟಣದಲ್ಲಿ ಬಿಡಾಡಿ ದನಗಳು ಹಾಗೂ ಬೀದಿನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಅದನ್ನು ಆದಷ್ಟು ಬೇಗ ಒಂದೆಡೆ ಸ್ಥಳಾಂತರಿಸಬೇಕು ಇಲ್ಲವಾದಲ್ಲಿ ಒಂದು ವಾರದ ಒಳಗೆ ಪ್ರತಿಭಟನೆ ನಡೆಸುವುದಾಗಿ ಈ ಹಿಂದೆಯೇ ತಿಳಿಸಿದ್ದರು. ಅಂತೆಯೇ ಇಂದು ಪ್ರತಿಭಟನೆ ನಡೆಸಿದ್ದಾರೆ.

ಈ ಹಿಂದೆ ಗೂಳಿಯೊಂದು ಹಲವಾರು ಜನರಿಗೆ ಗುದ್ದಿ ಘಾಸಿ ಉಂಟುಮಾಡಿತ್ತು, ಈ ಸಂಬಂಧ ಪಟ್ಟಣ ಪಂಚಾಯಿತಿ ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ, ಆದರೆ ಪಟ್ಟಣ ಪಂಚಾಯತ್ ವತಿಯಿಂದ ಯಾವುದೇ ಕ್ರಮಗಳನ್ನು ಈ ಕುರಿತಾಗಿ ಕೈಗೊಂಡಿಲ್ಲ ಆದ್ದರಿಂದ ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮನವಿಯನ್ನು ತಹಶೀಲ್ದಾರ್ ಅಂಬುಜಾ ಅವರಿಗೆ ನೀಡಿದರು.



ಮುಂದಿನ ದಿನಗಳಲ್ಲಿ ಈ ಕುರಿತು ಗಮನ ಹರಿಸದೇ ಇದ್ದಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.