ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ ) ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದಲ್ಲಿ ಸುಟ್ಟ ಕಾರು ಮತ್ತು ಮೃತದೇಹ ಪತ್ತೆಯಾಗಿದೆ.

ಆಗುಂಬೆ ವ್ಯಾಪ್ತಿಯ ಮಿಟ್ಲುಗೋಡು ಎಂಬ ಹಳ್ಳಿಯ ಸಮೀಪದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಮಾರುತಿ ಕಂಪನಿಯ ಶಿಫ್ಟ್ ಕಾರು ಸುಟ್ಟು ಕರಕಲಾಗಿದ್ದು ಆ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಕೆಲವು ದಿನಗಳ ಹಿಂದೆಯೇ ಈ ಕಾರು ಸುಟ್ಟುಹೋಗಿರುವ ಶಂಕೆ ವ್ಯಕ್ತವಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕಾರು ಮತ್ತು ವ್ಯಕ್ತಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವುದರಿಂದ ಇದು ಕೊಲೆಯೋ? ಆತ್ಮಹತ್ಯೆಯೋ? ಎಂದು ತನಿಖೆಯ ನಂತರ ತಿಳಿಯಬೇಕಿದೆ.

ಶಿವಮೊಗ್ಗ ಎಸ್ ಪಿ. ಕೆ ಎಂ ಶಾಂತರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.