ಚಿಕ್ಕಮಗಳೂರು : ಕೊಪ್ಪದಲ್ಲಿ ಕಡವೆ ಭೇಟೆಯಲ್ಲಿ ತೊಡಗಿದ್ದ ಬೇಟೆಗಾರರ ಬೆನ್ನು ಬಿದ್ದ ಕೊಪ್ಪ ವಲಯದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಕೊಪ್ಪ ಸಮೀಪದ ಹೊಸೂರು ಗ್ರಾಮದ ಕಾಫೀ ತೋಟದಲ್ಲಿ ನಿನ್ನೆ ಅಕ್ರಮವಾಗಿ ಕಡವೆಯೊಂದನ್ನು ಭೇಟೆಯಾಡಲಾಗಿತ್ತು, ಈ ಶಿಕಾರಿ ಸಂಬಂಧ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕೊಪ್ಪ ವಲಯ ಅರಣ್ಯಾಧಿಕಾರಿ ಪ್ರವೀಣ್ ನೇತೃತ್ವದ ತಂಡ ಕಡವೆಯನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ. ಬೇಟೆಗಾರರು ವಾಹನ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಸಂಬಂಧ ಅಪರಾಧಿಗಳ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡು, ಕಳ್ಳ ಬೇಟೆಯಲ್ಲಿ ತೊಡಗಿರುವ ಅಪರಾಧಿಗಳ ಮೇಲೆ ಕಠಿಣ ಶಿಕ್ಷೆ ಜರುಗಿಸುವ ಕುರಿತು ಕಾರ್ಯಾಚರಣೆ ಮುಂದುವರೆಸಿದ್ದಾರೆ.




0 Comments