ಚಿಕ್ಕಮಗಳೂರು : ಮೂಡಿಗೆರೆಯ ಸಾರ್ವಜನಿಕ ಮಹಾಗಣಪತಿ ಸೇವಾ  ಸಮಿತಿಯಿಂದ ಕೋವಿಡ್ ವಾರಿಯರ್ಸ್ಗ ಳಿಗೆ ಸನ್ಮಾನ. 

ಮೂಡಿಗೆರೆಯಲ್ಲಿ ಪ್ರತೀವರ್ಷದಂತೆ ಈ ವರ್ಷವೂ ಸಹ ಚೌತಿ ಹಬ್ಬಕ್ಕೆ ಶ್ರೀ  ಮಹಾಗಣಪತಿಯ ನ್ನು ಪ್ರತಿಷ್ಠಾಪಿಸಿ ವಿಜೃಂಭಣೆ ಇಂದ ಪೂಜಿಸಲಾಗುತ್ತಿದೆ. ಆದರೆ ಈ ಬಾರಿ ಕೋವಿಡ್ ನಿಯಮಾವಳಿ ಜಾರೀರುವುದರಿಂದ ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸದೆ, ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಮಾಡುವ ಮೂಲಕ ವಿಶೇಷವಾಗಿ, ಸರಳವಾಗಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ.

  


ಡಾ. ಪಿ ಎ ಅಡ್ಯಂತಾಯ ಸ್ಮಾರಕ ರಂಗಮಂದಿರದಲ್ಲಿ ಸೆ.10ರಂದು ಸಾರ್ವಜನಿಕ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದೆ ಸೆ.14 ರ ಮಂಗಳವಾರವಾದ ಇಂದು  ವಿಸರ್ಜನಾ ಮಹೋತ್ಸವ ನೆರವೇರಲಿದೆ.

ಈ ಕುರಿತು ಸೇವಾ ಸಮಿತಿಯ ಅಧ್ಯಕ್ಷರಾದ ಹಾಗೂ ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರೂ ಆಗಿರುವ ಧರ್ಮಪಾಲ್ ಮಾತನಾಡಿ, ಈ ಬಾರಿ ಅತ್ಯಂತ ಸರಳವಾಗಿ  ಕಾರ್ಯಕ್ರಮ ಆಯೋಜಿಸಲಾಗಿದೆ. ಆರಕ್ಷಕ ಸಿಬ್ಬಂದಿಗಳಿಗೆ ಹಾಗೂ ಸಾಮಾಜಿಕ ಸಕ್ರಿಯ ಸೇವಾ  ಸಂಸ್ಥೆಯ ಪದಾಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿಗಳು, ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದವರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿಭಿನ್ನವಾದ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ಮೂಡಿಗೆರೆಯ ಪಿ.ಎಸ್. ಐ ರವಿ, ಶ್ರೀನಿವಾಸ್, ಚಂದ್ರಶೇಖರ್, ದೇವರಾಜ್, ವಿಜಯ್, ದಯಾನಂದ್, ಮಲ್ಲಿಕಾರ್ಜುನ್, ಶಿವಕುಮಾರ್, ರುದ್ರೇಶ್ ಅವರಿಗೆ ಸನ್ಮಾನಿಸಲಾಯಿತು.

ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ರಘು ಜನ್ನಾಪುರ, ಸಂದರ್ಶ ಹ್ಯಾರಗುಡ್ಡೆ, ಭರತ್ ಕನ್ನೇಹಳ್ಳಿ, ಆನಂದ, ಸಂಜಯ್ ಮತ್ತಿತರರು ಇದ್ದರು.

- ತನು ಕೊಟ್ಟಿಗೆಹಾರ ವರದಿಗಾರರು.