ಇಂದು ಮಾಜಿ ಸಚಿವ ಡಿ.ಎನ್ ಜೀವರಾಜ್ ಮತ್ತು ಎಂ.ಕೆ ಪ್ರಾಣೇಶ್ ನೇತೃತ್ವದಲ್ಲಿ ಶೃಂಗೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಎಲ್ಲಾ ಪ್ರತಿನಿಧಿಗಳು ಒಗ್ಗೂಡಿ ಪರ್ಮಿಟ್ ಗೆ ಸಂಬಂಧಪಟ್ಟ ಗೊಂದಲಗಳ ಕುರಿತು ಜಿಲ್ಲಾಧಿಕಾರಿಗಳ ಬಳಿ ಚರ್ಚೆ ನಡೆಸಿ ಆ ಸಂಬಂಧ ಮಾಹಿತಿ ಪಡೆದುಕೊಂಡರು.
ಇದಕ್ಕೆ ಸ್ಪಂದಿಸಿದ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳು,ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮುಂದಿನ ಹತ್ತು ದಿನದಲ್ಲಿ ಸಾರಿಗೆ ಪ್ರಾಧಿಕಾರದ ಸಭೆ ಕರೆದು, ಮುಂಬರುವ ಕೆ.ಡಿ.ಪಿ ಸಭೆಯಲ್ಲಿ ಈಗಿರುವ ಗೊಂದಲಗಳನ್ನು ಬಗೆಹರಿಸಲಾಗುವುದು ಎಂದರು.
ಚಿಕ್ಕಮಗಳೂರು ಮತ್ತು ಶೃಂಗೇರಿ ಕ್ಷೇತ್ರದ ಆಟೋ ಚಾಲಕರು ಮತ್ತು ಮಾಲೀಕರು ಈ ಸಭೆಗೆ ಭಾಗವಹಿಸಿದ್ದರು.




0 Comments