ಚಿಕ್ಕಮಗಳೂರು : ವಿಶೇಷ ಪೊಲೀಸ್ ಅರಣ್ಯ ಸಂಚಾರಿದಳದ ಪೊಲೀಸರು ಮರಗಳ್ಳರ ಅಡ್ಡೆ ಮೇಲೆ ದಾಳಿ ಮಾಡಿ, ಅಪಾರ ಬೆಲೆ ಬಾಳುವ  ರಕ್ತ ಚಂದನ ಮರಗಳನ್ನು  ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಸುಮಾರು 420 ಕೆ.ಜಿ ತೂಕದ ರಕ್ತ ಚಂದನ ಮರವನ್ನು ಸಂಗ್ರಹಿಸಿಟ್ಟಿದ್ದ ಜಾಗದ ಮೇಲೆ ಪೊಲೀಸರು ದಾಳಿ ನಡೆಸಿದ್ದು, 2 ಲಕ್ಷದ ಅರವತ್ತು ಸಾವಿರ ರೂಪಾಯಿ ಮೌಲ್ಯ ಬೆಲೆಬಾಳುತ್ತದೆ ಎಂದು ತಿಳಿದು ಬಂದಿದೆ.

ರಕ್ತ ಚಂದನ ಮರದ ತುಂಡುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳಿಗಾ ಗ್ರಾಮದ ಓರ್ವರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಅಬ್ದುಲ್, ಹಮೀದ್  ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತನಿಖೆ ಆರಂಭಿಸಿದ್ದಾರೆ.

ಈ ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕಿ ಶೋಭಾ, ಸಿಬ್ಬಂದಿಗಳಾದ ದೇವರಾಜ್, ದಿವಾಕರ,ಕೃಷ್ಣರಾಜ್ ಅರಸ್, ದಿನೇಶ್, ದಿಲೀಪ್, ಹಾಲೇಶ್, ಕೃಷ್ಣ ಶೆಟ್ಟಿ ಭಾಗವಹಿಸಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು.