ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಪ್ರೌಢಶಾಲಾ ಮುಖ್ಯ ಶಿಕ್ಷಕ ಪಿ.ವಾಸುದೇವ್ ಅವರಿಗೆ ಸನ್ಮಾನಿಸಲಾಯಿತು.
ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಬಣಕಲ್ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪಿ. ವಾಸುದೇವ್ ಅವರು ಹಲವಾರು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದು ಎಷ್ಟೋ ಜನ ವಿದ್ಯಾರ್ಥಿಗಳ ಜೀವನಕ್ಕೆ ಮಾರ್ಗದರ್ಶಕರಾಗಿದ್ದಾರೆ. ಫ್ರೆಂಡ್ಸ್ ಕ್ಲಬ್ ಸದಸ್ಯರು ಬಹಳ ಗೌರವದಿಂದ ಶ್ರೀಯುತರನ್ನು ಸನ್ಮಾನಿಸಿದರು .
ಫ್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಷರಾದ ಪ್ರವೀಣ್ ಗೌಡ ಮಾತನಾಡಿ ಪಿ. ವಾಸುದೇವ್ ಅವರು ಕಳೆದ 30 ವರ್ಷಗಳಿಂದ ಬಣಕಲ್ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವುಗಳು ಬೆಳೆದಿದ್ದೇವೆ ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂದವ್ಯ ಹೊಂದಿರುವ ಅವರು ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದಾರೆ ಹಾಗೆ ಶಾಲೆಯಲ್ಲಿ ಸಹ ಶಿಕ್ಷಕರೊಂದಿಗೆ ಆತ್ಮೀಯತೆಯಿಂದ ಬೆರೆಯುವ ಅವರ ನಡವಳಿಕೆಯಿಂದಾಗಿ ಅವರನ್ನು ಎಲ್ಲರೂ ಇಷ್ಟ ಪಡುತ್ತಾರೆ, ಬಣಕಲ್ ಸುತ್ತ ಮುತ್ತ ಚಿರ ಪರಿಚಿತ ಹೆಸರು ಪಿ.ವಾಸುದೇವ್ ಬಣಕಲ್, ಗ್ರಾಮದಲ್ಲಿ ತನ್ನ ಶಾಲೆಯನ್ನು ಹೊರತುಪಡಿಸಿ ಬೇರೆ ಮಕ್ಕಳಿಗೂ ಮಾರ್ಗದರ್ಶನ ನೀಡುತ್ತಾ ಉತ್ತಮ ಭವಿಷ್ಯ ರೂಪಿಸಲು ಸಹಕಾರಿ ಆಗಿದ್ದಾರೆ. ಶಾಲೆಯ ಏಳಿಗೆಗಾಗಿ ಅವರು ನೀಡುತ್ತಾ ಬಂದಿರುವ ಕೊಡುಗೆ ಅಪಾರ. ಸದಾ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ರೂಪಿಸುತ್ತಾ ಶಾಲೆಗೆ ಗೌರವ ತಂದುಕೊಟ್ಟಿದ್ದಾರೆ. ಪ್ರತಿ ವರ್ಷ ಶಾಲೆಗೆ ಉತ್ತಮ ಫಲಿತಾಂಶ ದೊರೆಯುವಂತೆ ಮಾಡಲು ಅವರ ಕೊಡುಗೆ ಅಪಾರ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅವರ ಕೊಡುಗೆ ನಿಜಕ್ಕೂ ಪ್ರಶಂಸನೀಯವಾಗಿದೆ ಎಂದರು. ಸರಳ ವ್ಯಕ್ತಿತ್ವದ ವಾಸುದೇವ್ ರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಪ್ರಶಸ್ತಿ ಬಂದಿರುವುದು ನಿಜಕ್ಕೂ ಶಾಲೆಗೂ ಹಾಗೂ ಬಣಕಲ್ ನಾಗರಿಕರಿಗೂ ಹೆಮ್ಮೆಯ ವಿಷಯ ಮುಂದೊಂದು ದಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಆಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರಾದ ಪ್ರವೀಣ್ ಅರುಣ್ ಮಧು ನಿಶಾಂತ್ ಹಸೈನರ್ ಸೂರಿ ಹಾಗೂ ವೀಕ್ಷಕ್ ಹಾಜರಿದ್ದರು.




0 Comments