ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಹಳ್ಳಿಯ ಗ್ರಾಮಸ್ಥರು ನೂತನವಾಗಿ ತೆರೆದಿರುವ ಬಾರ್ ಅನ್ನು ಈ ಕೂಡಲೇ ಮುಚ್ಚಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಊರಿನ ಗ್ರಾಮಸ್ಥರು,ಮಹಿಳೆಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಪ್ರತಿಭಟನೆಯಲ್ಲಿ ತೊಡಗಿದ್ದರು. 

ಇಷ್ಟು ವರ್ಷಗಳ ಕಾಲ ನಮ್ಮ ಊರಿನಲ್ಲಿ ಬಾರ್ ಇರಲಿಲ್ಲ, ನಮ್ಮ ಗಂಡಂದಿರು ವಾರದಲ್ಲಿ ಯಾವಾಗಲಾದರೊಮ್ಮೆ ಕುಡಿಯುತ್ತಿದ್ದರು, ಈಗ ಹಾಗಲ್ಲ ದಿನನಿತ್ಯವೂ ಕುಡಿಯಲು ಆರಂಭಿಸುತ್ತಾರೆ. ಇದರಿಂದಾಗಿ ನಮ್ಮ ಕುಟುಂಬವೇ ಸರ್ವನಾಶವಾಗುತ್ತದೆ, ಈ ಮಧ್ಯಪಾನ ಎಂಬುದು ಮಹಾ ದುಶ್ಚಟ ಇದನ್ನು ಕಲಿತವರು ಅದರ ದಾಸರಾಗುತ್ತಾರೆ ಆದ್ದರಿಂದ ನಮ್ಮ ಊರಿನಲ್ಲಿ ನೂತನವಾಗಿ ಆರಂಭವಾಗಿರುವ ಬಾರನ್ನು ಈ ಕೂಡಲೇ ಮುಚ್ಚಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಊರಿನ ಮಹಿಳೆಯೊಬ್ಬರು ತಿಳಿಸಿದರು.

ಮಕ್ಕಳು ಶಾಲೆಗೆ ಹೋಗುವ ಹಾದಿಯಲ್ಲಿ ಈ ಬಾರ್ ಇದೆ ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳೂ ಸಹ  ಅದರ ಕುರಿತಾಗಿ ಮುಂದುವರೆಯುತ್ತಾರೆ ಇದಲ್ಲದೇ ಈ ಬಾರ್ ನಿಂದ ಸುತ್ತಮುತ್ತಲಿನ 28 ಹಳ್ಳಿಯ ಮಹಿಳೆಯರು ಸಂಕಷ್ಟ ಕ್ಕೀಡಾಗುವ ಎಲ್ಲಾ ಲಕ್ಷಣಗಳು ಇದೆ ಆದ್ದರಿಂದ ಈ ಕೂಡಲೇ ಬಾರ್ ಮುಚ್ಚುವಂತೆ ಗ್ರಾಮಸ್ಥರು ಆಗ್ರಹ ಮಾಡುತ್ತಿದ್ದೇವೆ ಎಂದರು

- ತನು ಕೊಟ್ಟಿಗೆಹಾರ ವರದಿಗಾರರು.