ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಬಾಳೂರಿನ ಗ್ರಾಮಸ್ಥರು ಇಂದು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೋರಿ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಬಾಳೂರಿನ ಕಲನಾಥೇಶ್ವರ ದೇವಸ್ಥಾನಕ್ಕೆ ಹಲವು ಸಮಯಗಳಿಂದ ಅಭಿವೃದ್ದಿಗಾಗಿ ಹಣ ಬಿಡುಗಡೆ ಮಾಡಿರಲಿಲ್ಲ, ಈ ಕುರಿತು ಗಮನ ಹರಿಸಿ ಆದಷ್ಟು ಬೇಗ ಹಣ ಬಿಡುಗಡೆ ಮಾಡಿ ಕೊಡಬೇಕೆಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸುರಭಿ,ರಘು, ಬಿ.ಎಂ ಭರತ್, ಬಿ.ಬಿ ಮಂಜುನಾಥ್,ಜಗದೀಶ್, ರೋಹಿತ್,ಸಂದೀಪ್, ಇನ್ನಿತರರು ಹಾಜರಿದ್ದರು.




0 Comments