ಶೃಂಗೇರಿ : ಶೃಂಗೇರಿಯ ಉಭಯ ಶ್ರೀಗಳ ಆಶೀರ್ವಾದ ಪಡೆದ ನಮ್ಮೂರಿಗೊಂದು ಸ್ಕೂಲ್ ಬೇಕು  ಎಂಬ ಚಿತ್ರ ತಂಡವು, ಶೃಂಗೇರಿ ಶ್ರೀ ಮಠದ ಆಡಳಿತಾಧಿಕಾರಿ ಗುರು ಸೇವಾಧುರೀಣ ಪದ್ಮಶ್ರೀ ಪುರಸ್ಕೃತ ಡಾಕ್ಟರ್ ವಿ.ಆರ್. ಗೌರೀಶಂಕರ್ ಅವರಿಂದ ಚಾಲನೆ ಪಡೆದುಕೊಂಡು ಅವರ ಶುಭ ಹಾರೈಕೆಗಳಿಂದ ಆರಂಭಗೊಂಡಿದ್ದು ಚಿತ್ರೀಕರಣ ಭರದಿಂದ ಸಾಗಿದೆ.

ಶೃಂಗೇರಿಯ ಸುತ್ತ ಮುತ್ತಲಿನ ಭಾಗದಲ್ಲಿ ಈ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಈ ಚಿತ್ರದ ಪಾತ್ರಧಾರಿ ಬಸವ ತನ್ನ ತಾಯಿಗೆ ಸಹಾಯ ಮಾಡುತ್ತ, ಹಾಲು ಹಾಕುತ್ತ, ಓದಿನಲ್ಲಿ ತುಂಬಾ ಆಸಕ್ತಿ ಇಟ್ಟುಕೊಂಡಿರುತ್ತಾನೆ. ತನ್ನ ಊರಿನಿಂದ ಪಟ್ಟಣಕ್ಕೆ ತನ್ನೂರಿಗೆ ಇರುವ ಒಂದೇ ಒಂದು ಬಸ್ಸಿನ ಮೂಲಕ ಶಾಲೆಗೆ ಬರಬೇಕಾಗಿರುತ್ತದೆ. ಇಂಥಹ ಸಂದರ್ಭದಲ್ಲಿ ತನ್ನ ಊರು ಹಾಗೂ ಶಾಲೆಯ ಅನಾನುಕೂಲತೆಗಳನ್ನು ಶಿಕ್ಷಣ ಮಂತ್ರಿಗಳವರೆಗೆ ಹೇಗೆ ತಲುಪಿಸುತ್ತಾನೆ ಎನ್ನುವ ಕಥೆಯೇ  ನಮ್ಮೂರಿಗೊಂದು ಸ್ಕೂಲ್ ಬೇಕು.

ಮಾತೃಶ್ರೀ ಪಿಕ್ಚರ್ಸ್ ಅಡಿಯಲ್ಲಿ ಚಿತ್ರ ಮೂಡಿ ಬರುತ್ತಿದ್ದು ಅಕ್ಷಯ್ ಎನ್. ಜೋಶಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ-ಚಿತ್ರಕಥೆ ನಾಗನಾಥ ಮಾಧವರಾವ್ ಜೋಶಿ , ಸಂಭಾಷಣೆ ನಿರ್ದೇಶನ ಬಿ.ರಾಮಮೂರ್ತಿ ಹಾಗೂ ಸರ್ವಜ್ಞ, ಹೇಮಂತ್, ಐಶ್ವರ್ಯ, ಧನ್ವಿ ಸ್ಥಳೀಯ ಕಲಾವಿದರಾದ ಕೊ.ಸು.ನಾಗೇಶ್, ಸಹಕಾರ ಜಿ.ಕುಮಾರ್. ಹಾಗೂ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.