ಮಡಿಕೇರಿ : (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತ ಬಾಲಕಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ ಅಪರಾಧಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಅಸ್ಸಾಂ ನಿಂದ ಕೂಲಿಕೆಲಸಕ್ಕೆಂದು ಬಂದು ಕೊಡಗು ಜಿಲ್ಲೆಯ ಹುದಿಕೇರಿ ಸಮೀಪದ ಹೈಸುಡ್ಲೂರು ಗ್ರಾಮದ ಬೋಜ್ಜಂಗಡ ದೇವಯ್ಯ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತ ಅಲ್ಲೇ ವಾಸವಿದ್ದ ಸುಹರ್ ಅಲಿ ಎಂಬಾತ ಹೈಸುಡ್ಲೂರು ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಮಾಡಿದ್ದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಹರ್ ಅಲಿಯ ಮೇಲೆ ಈ ಹಿಂದೆಯೇ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಸಂಪೂರ್ಣ ತನಿಖೆಯನ್ನು ವಿರಾಜಪೇಟೆ ಪೊಲೀಸ್ ಉಪಾಧೀಕ್ಷಕ ನಾಗಪ್ಪರವರು ಮಾಡಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿದೇಶಿ ಮೆಷಿನರಿಗಳ ಪಿತೂರಿಯಿಂದ ರಾಜ್ಯದಲ್ಲಿ ಬಲವಂತದ ಮತಾಂತರ, ಕಠಿಣ ಕಾನೂನಿಗೆ ಕೆ.ಜಿ ಬೋಪಯ್ಯ ಆಗ್ರಹ
ಆ ಪ್ರತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ ವಿರಾಜಪೇಟೆಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಆತ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎಸ್.ಆರ್ ದಿಂಡಲ್ ಕೊಪ್ಪ ರವರು ಐದು ವರ್ಷಗಳ ಜೈಲು ಶಿಕ್ಷೆ, ಐದು ಸಾವಿರ ದಂಡ ವಿಧಿಸಿದ್ದಾರೆ.



0 Comments