ಚಿಕ್ಕಮಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಹಳಷ್ಟು ಮಾಧ್ಯಮಗಳಲ್ಲಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹಬ್ಬಿದೆ.

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಮೂಡಿಗೆರೆ ಕ್ಷೇತ್ರದ ಶಾಸಕ ಎಂ ಪಿ ಕುಮಾರಸ್ವಾಮಿ ನನ್ನನ್ನು ರಾಜಕೀಯವಾಗಿ ಸಹಿಸಲಾಗದ ಕೆಲವು ಜನರು ಈ ರೀತಿಯಾದ ಕುತಂತ್ರಗಳನ್ನು ನನ್ನ ವಿರುದ್ಧ ಮಾಡುತ್ತಿದ್ದಾರೆ, ಅವರಿಗೆ ತಕ್ಕ ರೀತಿಯಲ್ಲಿಯೇ ನಾನು ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯು ನನಗೆ ಮಾತೃಪಕ್ಷ ಮೂರು ಬಾರಿ ನನ್ನನ್ನು ಶಾಸಕನನ್ನಾಗಿ ಮಾಡಿದೆ, ಹಾಗೂ ರಾಜ್ಯದ ಜನತೆಯಲ್ಲಿ ನನ್ನನ್ನು ಗುರುತು ಪಡಿಸಿದೆ. ಇಂದಿಗೂ ನಾನು ಮಾತೃ ಸಮಾನವಾದ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ. 

ಈ ವದಂತಿಗೆ ಪಕ್ಷದ ಹಿರಿಯರು ಯಾರು ಕಿವಿಗೊಡುವುದಿಲ್ಲ, ಅಂತೆಯೇ ನನ್ನ ನೆಚ್ಚಿನ ಅಭಿಮಾನಿಗಳು ಹಾಗೂ ಪಕ್ಷದ ಬೆಂಬಲಿಗರು ಯಾರೂ ಕೂಡ ಈ ವದಂತಿಗೆ ಕಿವಿ ಕೊಡಬಾರದು ಎಂದು ಮೂಡಿಗೆರೆಯ ಶಾಸಕ ಎಂ.ಪಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ.