ಸಕಲೇಶಪುರ : ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂಬಂಧ, ಸರ್ಕಾರ ಮಾರ್ಗಸೂಚಿಗಳನ್ನು ಈ ಹಿಂದೆಯೇ ಹೊರಡಿಸಿತ್ತು.
ಮಾರ್ಗಸೂಚಿಯ ವಿರುದ್ಧವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಗಣಪತಿ ವಿಸರ್ಜನೆಯನ್ನು ಮಾಡಿದ್ದರು ಈ ವೇಳೆ ಪೊಲೀಸರ ಕಾರ್ಯಗಳಿಗೂ ಸಹ ಅಡ್ಡಿಯುಂಟು ಮಾಡಿದರು.
ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡುವ ವೇಳೆ ಪೊಲೀಸರ ಮನವಿಗೂ ಸ್ಪಂದಿಸದೇ, ಇನ್ನೊಂದೆಡೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೇ ಕಾರ್ಯಕರ್ತರು ಗಣಪತಿ ವಿಸರ್ಜನೆಯನ್ನು ಮಾಡಿದ್ದರು.
ಪೊಲೀಸರ ಕರ್ತವ್ಯಕ್ಕೆ ಅಡ್ಡ ಪಡಿಸಿದ ಹಿನ್ನೆಲೆ 14 ಜನರ ಮೇಲೆ ಸುಮೋಟೋ ಕೇಸ್ ದಾಖಲಾಗಿದೆ. ಈ ಮಧ್ಯೆ ಹಿಂದೂ ಕಾರ್ಯಕರ್ತರನ್ನು ತಡೆಯಲು ಮುಂದಾದ ಪಿಎಸ್ಐ ಬಸವರಾಜ್ ಅವರನ್ನು ಸಹ ಬಜರಂಗದಳದ ಕಾರ್ಯಕರ್ತರು ತಳ್ಳಾಡಿದ್ದರು. ಈ ಸಂಬಂಧ ಮಧ್ಯರಾತ್ರಿ 12 ಗಂಟೆಗೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಚಿಂಚೋಳಿ ಯವರು 14 ಜನರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ್ದಾರೆ.




0 Comments