ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 07 ರವರೆಗೆ ಸೇವೆ ಹಾಗೂ ಸಮರ್ಪಣೆ ಎಂಬ ವಿಶೇಷ ಅಭಿಯಾನದಡಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ.
ಈ ಅಂಗವಾಗಿ ಹಲವಾರು ಸೇವಾ ಕಾರ್ಯಗಳನ್ನು ರಾಜ್ಯಾದ್ಯಂತ ಬಿಜೆಪಿ ಆಯೋಜನೆ ಮಾಡಿದ್ದು, ಈ ನಿಟ್ಟಿನಲ್ಲಿ ಇಂದು ಕೊಪ್ಪ ಮಂಡಲ ಮೋರ್ಚಾ ವತಿಯಿಂದ ಮೆಗುಂದ ಹೋಬಳಿಯ ತೀರ್ಥಕೆರೆ ಜಲಪಾತದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಮತ್ತು ಕಸ ಮುಕ್ತಗೊಳಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೆಸವೆ, ಕೆಡಿಪಿ ಸದಸ್ಯ ಮಣಿಕಂಠನ್ ಕಂದಸ್ವಾಮಿ, ಯುವ ಮೋರ್ಚಾದ ಅಧ್ಯಕ್ಷ ಮಂಜುನಾಥ್ ಕಾರ್ಬೈಲ್, ಯುವ ಮೋರ್ಚಾ ಉಪಾಧ್ಯಕ್ಷ ಸುಭಾಷ್ ಚಂದ್ರ, ಕಾರ್ಯದರ್ಶಿ ಸಂದೇಶ್, ಅರ್ಜುನ್, ಹೋಬಳಿ ಅಧ್ಯಕ್ಷ ಸಂತೋಷ್, ಸಂದೀಪ್ ಮೇಗೂರು, ಪುನೀತ್, ಎಸ್ಟಿ ಮೋರ್ಚಾದ ಮಂಡಲ ಅಧ್ಯಕ್ಷ ಚೇತನ್ ಗುರುಪ್ರಸಾದ್, ಉಪಾಧ್ಯಕ್ಷ ಪದ್ಮನಾಭ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಲಲಿತಾ, ಅತ್ತಿ ಕೊಡಿಗೆ ಪಂಚಾಯತ್ ಸದಸ್ಯೆ ಪ್ರೇಮ, ಶಕ್ತಿ ಕೇಂದ್ರದ ಪ್ರಮುಖರಾದ ಹಾಲಪ್ಪ ಶಿಡ್ಲೆ ಮನೆ, ಭರತ್ ರಾಜ್, ನೇಡಂಗಿ ಸುರೇಂದ್ರ, ರವಿ ಹಾಗೂ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.



0 Comments