ಕೊಪ್ಪ : ನಾರ್ವೆಯಲ್ಲಿರುವ ಸ್ವಯಂ ಪ್ರಕಾಶ ಸರಸ್ವತಿ ಪ್ರೌಢಶಾಲೆಯಲ್ಲಿ ನಮ್ಮ ಶಾಲೆ ಎಂಬ ಶೀರ್ಷಿಕೆಯಡಿಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸತತ 37 ವರ್ಷಗಳ ಕಾಲ ಶಾಲೆಗಾಗಿ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಶ್ರೀಯುತ ಜನಾರ್ಧನ್ ಮಂಡಗಾರ್ ರವರಿಗೆ. 2006-07 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡಿದ ಶಿಷ್ಯವೃಂದ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ನಡೆಸಿ ಶ್ರೀಯುತ ಜನಾರ್ಧನ್ ಮಂಡಗಾರು ರವರನ್ನು ವಿನಯಪೂರ್ವಕವಾಗಿ ಅಭಿನಂದಿಸಿ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಎಂದಿಗೂ ನಾವು ನಮಗೆ ವಿದ್ಯೆಯನ್ನು ಕಲಿಸಿದ ಗುರುಗಳನ್ನು ಮರೆಯಬಾರದು ಹಾಗೂ ಅವರಿಗೆ ಗೌರವವನ್ನು ಕೊಡಬೇಕು. ಒಂದು ಕಲ್ಲನ್ನು ಚೆನ್ನಾಗಿ ಕೆತ್ತಿ ಶಿಲ್ಪವನ್ನಾಗಿ ಮಾಡುವ ಶಿಲ್ಪಿಗೆ ತಾನು ಮಾಡಿದಂತಹ ಶಿಲ್ಪವನ್ನು ನೋಡಿದಾಗ ತುಂಬಾ ಸಂತಸವಾಗುತ್ತದೆ ಅದೇ ರೀತಿಯಲ್ಲಿ
ಶಿಲ್ಪಿಯ ಹಾಗೆ ಸಂತಸ ಪಡುವ ಇನ್ನೊಬ್ಬ ವ್ಯಕ್ತಿ ಗುರು, ಒಳ್ಳೆಯ ಗುರು ಎಂದಿಗೂ ವಿದ್ಯಾರ್ಥಿಗಳ ಏಳಿಗೆಯನ್ನೇ ಬಯಸುತ್ತಿರುತ್ತಾನೆ ಮತ್ತು ಅವರ ಏಳಿಗೆಯಲ್ಲಿ ಸಂತಸವನ್ನು ಕಾಣುತ್ತಾನೆ. ಅಂತಹ ಗುರುವನ್ನು ನಾವು ಗೌರವದಿಂದ ಕಾಣಬೇಕು ಎಂದು ಶಾಲೆಯ ಹಿರಿಯ ವಿದ್ಯಾರ್ಥಿ ಯೋರ್ವರು ಹೇಳಿದರು.
ಜನಾರ್ಧನ್ ರವರು ಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡಿರುವಂತಹ ಕೊಡುಗೆ ಅಪಾರವಾದುದು. ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಉನ್ನತ ಮಟ್ಟದಲ್ಲಿ ಸೇವೆಯನ್ನು ಸಲ್ಲಿಸಿ ಅನೇಕ ವಿದ್ಯಾರ್ಥಿಗಳ ಉಜ್ವಲಭವಿಷ್ಯಕ್ಕೆ ಕಾರಣಿಕೃತರಾಗಿದ್ದಾರೆ ಅವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ವಿದ್ಯಾರ್ಥಿಗಳು ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್ ಎಲ್ ರವೀಂದ್ರ, ವಸಂತಕುಮಾರಿ, ಅರುಣ್ ಕುಮಾರ್, ಅಶ್ವಿನಿ, ಶೋಭಾ ಮುಂತಾದ ಶಿಕ್ಷಕರು ಮತ್ತು ಹಳೆ ವಿದ್ಯಾರ್ಥಿಗಳಾದ ಹರೀಶ್ ನಾರ್ವೆ, ಪ್ರತಾಪ್ ಮುತ್ತೂರು, ಅನಿಲ್ ಬೆಳಗೊಳ, ಶಂಕರ್, ಕೆ ಮಂಜುನಾಥ್, ಆದರ್ಶ್, ಮನು, ಅರ್ಜುನ್, ಸುದರ್ಶನ್, ರವೀಂದ್ರ, ಶೃತಿ, ಮಾಧುರಿ ಮುಂತಾದವರು ಉಪಸ್ಥಿತರಿದ್ದರು.


0 Comments