ಚಿಕ್ಕಮಗಳೂರು : ಸರ್ವೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ವ್ಯಕ್ತಿಯೊಬ್ಬರು ಸರ್ವೇ ಕಛೇರಿಯ ಎದುರು ಎಕಾಂಗಿಯಾಗಿ ಪ್ರತಿಭಟನೆಯನ್ನು ನಡೆಸಿದ ಘಟನೆ ಚಿಕ್ಕಮಗಳೂರು  ತಾಲೂಕು ಕಛೇರಿಯ ಮುಂಭಾಗ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಹಳಿಯೂರು ಗ್ರಾಮದಲ್ಲಿ ವಾಸವಾಗಿದ್ದ ಪುಟ್ಟಸ್ವಾಮಿಗೌಡ ಎಂಬುವವರು, ಸರ್ವೇ ಅಧಿಕಾರಿಗಳ  ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ವೇಯನ್ನು ನಡೆಸಲು ಅಧಿಕಾರಿಗಳು ತೋರುತ್ತಿರುವ  ಬೇಜವಾಬ್ದಾರಿ ವರ್ತನೆಯನ್ನು ಕಂಡ ಇವರು ಅಧಿಕಾರಿಗಳ ವಿರುದ್ಧ ಕಛೇರಿಯ ಎದುರು ಧರಣಿ ನಡೆಸಿದ್ದಾರೆ.

ಸರ್ವೇ ಅಧಿಕಾರಿಗಳು ಸರ್ವೆಯನ್ನು ಮಾಡಲು ಪುಟ್ಟಸ್ವಾಮಿಯವರಿಂದ 17,000 ಹಣವನ್ನು 07 ತಿಂಗಳ ಹಿಂದೆಯೇ ತೆಗೆದುಕೊಂಡಿದ್ದರು 

ಆದರೇ ಇಲ್ಲಿಯ ತನಕವೂ ಸರ್ವೆಯನ್ನು ಮಾಡಲು ಯಾವ ಅಧಿಕಾರಿಗಳು ಸಹ ಬಂದಿರುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಈ ವಿಷಯವಾಗಿ ಅನೇಕ ಬಾರಿ ಕಛೇರಿಗೆ ಬಂದರೂ ಅಲ್ಲಿದ್ದಂತಹ ಅಧಿಕಾರಿಗಳು ಪುಟ್ಟಸ್ವಾಮಿಯವರಿಗೆ ಉಡಾಫೆ ಉತ್ತರ ನೀಡಿ ಅವರನ್ನು ಸ್ಥಳದಿಂದ ಕಳುಹಿಸಿದ್ದಾರೆ. ಇದರಿಂದ ಬೇಸತ್ತು ತೀವ್ರ ಆಕ್ರೋಶಗೊಂಡ ಪುಟ್ಟಸ್ವಾಮಿ ಕಛೇರಿಯ ಮುಂಭಾಗ ಏಕಾಂಗಿಯಾಗಿ ಇಂದು ಪ್ರತಿಭಟನೆ ನಡೆಸಿದರು.