ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಸೇತುವೆಯ ಬಳಿ ಭೀಕರ ಅಪಘಾತ ಸಂಭವಿಸಿದೆ.

ಮೂಡಿಗೆರೆ ಬಿಳುಗೊಳದ ಸುಭಾಷ್ ನಗರದ ನಿವಾಸಿ ದಿನೇಶ್ ಬೈಕಿನಲ್ಲಿ ತೆರಳುತ್ತಿದ್ದಾಗ ಅತಿವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದ ಹಾಸನ ಮೂಲದ ವ್ಯಕ್ತಿಯು ರಭಸವಾಗಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ದಿನೇಶ್ ಸಾವನ್ನಪ್ಪಿದ್ದಾರೆ.

ದಿನೇಶ್ ನೊಂದಿಗೆ ಬೈಕಿನಲ್ಲಿದ್ದ ಇನ್ನೊಬ್ಬರಿಗೆ ತೀವ್ರವಾಗಿ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ವ್ಯಕ್ತಿಯು ಹಾಸನ ಮೂಲದವರೆಂದು ತಿಳಿದುಬಂದಿದೆ. ಅತಿವೇಗದ ಚಾಲನೆಯೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ. ಮೂಡಿಗೆರೆಯ ಗೋಣಿಬೀಡು ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತನು ಕೊಟ್ಟಿಗೆಹಾರ ವರದಿಗಾರರು.