ಚಿಕ್ಕಮಗಳೂರು : ತಾಲೂಕಿನ ಉದ್ದೇಬೋರನಹಳ್ಳಿ ಬಳಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದೆ.

ಟಿವಿಎಸ್ ಎಕ್ಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಗಳನ್ನು ಸಾಗಿಸುವ ಲಾರಿಯ ನಡುವೆ ಅಪಘಾತವಾಗಿದ್ದು, ಸ್ಥಳದಲ್ಲೇ ಇಬ್ಬರು ಮೃತರಾಗಿದ್ದಾರೆ. ಮೃತ ಹೊಂದಿದ ವ್ಯಕ್ತಿಗಳನ್ನು ಜಯಣ್ಣ (58) ಹಾಗೂ ರಕ್ಷಿತಾ (19) ಎಂದು ಗುರುತಿಸಲಾಗಿದೆ.

ಹಿರಿಯ ಮಗಳ ಮನೆಗೆ ಬಾಗಿನ ಕೊಡಲೆಂದು ತನ್ನ ಕಿರಿಯ ಮಗಳೊಂದಿಗೆ ಪಿಳ್ಳೇನಹಳ್ಳಿ ಗೆ ಹೋಗಿ ವಾಪಸ್ ಬರುವಾಗ ಉದ್ದೇಬೋರನಹಳ್ಳಿ ಸಮೀಪ ಈ ದುರ್ಘಟನೆ ಸಂಭವಿಸಿದೆ.


ಪ್ರಕರಣದ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

-ತನು ಕೊಟ್ಟಿಗೆಹಾರ, ವರದಿಗಾರರು.