ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿನ 8 ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಂದಕಕ್ಕೆ ಬಿದ್ದ ಘಟನೆ ನಡೆದಿದೆ.
ಕಾರು ಬಣಕಲ್ ನಿಂದ ಬೆಳ್ತಂಗಡಿ ಕಡೆಗೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ. ಕಾರಿನಲ್ಲಿ ತೆರಳುತ್ತಿದ್ದ ಜಗದೀಶ್ ಮತ್ತು ಅವರ ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿದೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಉಜಿರೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ರವಾನಿಸಲಾಗಿದೆ.
ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸೇರಿಸುವ ಮಾರ್ಗವು ಚಾರ್ಮಾಡಿ ಘಾಟಿಯಾಗಿದ್ದು ಘಾಟಿಯ ತಿರುವುಗಳಲ್ಲಿ ಆಗಾಗ ಈ ರೀತಿಯ ಅವಘಡಗಳು ಸಂಭವಿಸುತ್ತಿರುತ್ತದೆ. ಚಾಲಕನು ವಾಹನದ ಮೇಲಿನ ಸ್ವಲ್ಪ ನಿಯಂತ್ರಣವನ್ನು ತಪ್ಪಿದರೂ ಕೂಡ ಅಪಾಯ ಕಟ್ಟಿಟ್ಟಬುತ್ತಿ ಆದ್ದರಿಂದ ಬಹಳ ಜಾಗರೂಕರಾಗಿ ಈ ಮಾರ್ಗದಲ್ಲಿ ಸಂಚರಿಸುವುದು ಸೂಕ್ತ.
-ತನು ಕೊಟ್ಟಿಗೆಹಾರ ವರದಿಗಾರರು.



0 Comments