ರಾಜ್ಯದ ರೈತರಿಗೆ ಸರ್ಕಾರದ ವತಿಯಿಂದ 20,810 ಕೋಟಿ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ನೀಡಲಾಗುವುದು ಎಂದು ರಾಜ್ಯದ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಸಹಕಾರಿ ಕ್ಷೇತ್ರ ಬಲವರ್ಧನೆಗೊಳಿಸಲು ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯದ ಸಹಕಾರ ನೀಡಿ ರೈತರ ಬದುಕನ್ನು ಉನ್ನತಿಗೊಳಿಸಲಾಗುವುದು ಎಂದರು. ಸಹಕಾರಿ ಸಂಘಗಳಲ್ಲಿ ಮೂರು ಲಕ್ಷ ರೂಗಳ ವರೆಗೆ ಸಾಲವನ್ನು ಕೃಷಿ ಸೌಲಭ್ಯಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವುದು ಹಾಗೂ ದೀರ್ಘಾವಧಿಯ ಸಾಲಕ್ಕೆ ಶೇಕಡಾ 3 ರಷ್ಟು ಬಡ್ಡಿ ವಿಧಿಸಿ 10 ಲಕ್ಷ ರೂಗಳನ್ನು ನೀಡಲಾಗುವುದು ಎಂದಿದ್ದಾರೆ.
ಕಳೆದ ವರ್ಷದಲ್ಲಿ 14500 ಕೋಟಿ ರೂಪಾಯಿ ಹಣವನ್ನು ಸಾಲದ ರೂಪವಾಗಿ ನೀಡಲು ಯೋಜನೆ ಹಾಕಿಕೊಳ್ಳಲಾಗಿತ್ತು, ಆದರೆ ಅದನ್ನು ಮೀರಿಯೂ ಹೆಚ್ಚಿನ ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿತ್ತು ಎಂಬ ಮಾಹಿತಿಯನ್ನು ಸಹ ನೀಡಿದ್ದಾರೆ.
ಸಹಕಾರಿ ಸಂಘಗಳ ಮೂಲಕ ಇನ್ನೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ, ಜನರ ಬದುಕಿಗೆ ಪೂರಕವಾಗಿ ಬೇಕಾಗುವ ಸವಲತ್ತುಗಳನ್ನು ನೀಡುವ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ.




0 Comments