ಚಿಕ್ಕಮಗಳೂರು : ಮಲೆನಾಡಿನ ಭಾಗದಲ್ಲಿ ವಿರಳವಾಗಿ ಕಂಡುಬರುವ ಹುಲಿ ಬೆಕ್ಕೊಂದು ವಾಹನ ಹರಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಲಿಬೆಕ್ಕೊಂದು ವಾಹನಕ್ಕೆ ಅಡ್ಡ ಬಂದು ಅಸುನೀಗಿದ ಘಟನೆ ನಡೆದಿದೆ.ದಟ್ಟ ಅರಣ್ಯ ಪ್ರದೇಶವಾದ ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಪ್ರಾಣಿಗಳು ಒಂದೆಡೆ ಇಂದ ಇನ್ನೊಂದೆಡೆಗೆ ರಸ್ತೆ ದಾಟುತ್ತಿರುತ್ತದೆ. ಈ ಸಮಯದಲ್ಲಿ ವೇಗವಾಗಿ ವಾಹನ ಚಾಲನೆ ಮಾಡುವ ಸವಾರರಿಗೆ ಪ್ರಾಣಿಗಳು ಕಾಣದೆ ಅವುಗಳ ಮೇಲೆ ವಾಹನ ಹರಿಸಿ ಪ್ರಾಣಿಗಳ ಮಾರಣ ಹೋಮ ನಡೆಸುತ್ತಾರೆ.
ಹಲವರು ಹುಲಿಬೆಕ್ಕನ್ನು ಚಿರತೆ ಮರಿ ಇರಬಹುದೆಂದು ಸಂಶಯ ವ್ಯಕ್ತಪಡಿಸಿದ್ದರು, ಆದರೆ ಇದು ಹುಲಿ ಬೆಕ್ಕೆಂದು ಮರಣೋತ್ತರ ಪರೀಕ್ಷೆಯ ವೇಳೆಗೆ ತಿಳಿದು ಬಂದಿದೆ, ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಬೆಕ್ಕೆಂದು ಸ್ಪಷ್ಟನೆ ನೀಡಿದ್ದಾರೆ.
ಹುಲಿ ಬೆಕ್ಕು ಅಳಿವಿನ ಅಂಚಿನಲ್ಲಿರುವ ಅಪರೂಪದ ಸಂತತಿ. ಇದನ್ನು ಹೆಚ್ಚಾಗಿ ಬೇಟೆಗಾರರು ಬೇಟೆಯಾಡುತ್ತಾರೆ, ಕೇವಲ ಪಶ್ಚಿಮ ಘಟ್ಟದ ಭಾಗದಲ್ಲಿ ಮಾತ್ರ ಕಂಡುಬರುತ್ತದೆ. ಇದರ ಜೀವತಾವಧಿಯು ಕೇವಲ ಎಳರಿಂದ ಎಂಟು ವರ್ಷ, ಕಾಡು ಕೋಳಿ, ಮೊಲ, ಅಳಿಲು, ಪಕ್ಷಿಗಳನ್ನು ಬೇಟೆ ಯಾಡುವ ಈ ಪ್ರಾಣಿ ಹೆಚ್ಚಾಗಿ ಮರದ ಮೇಲೆ ವಾಸ ಮಾಡುತ್ತದೆ.ಈ ರೀತಿಯ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ತನು ಕೊಟ್ಟಿಗೆಹಾರ, ವರದಿಗಾರರು.



0 Comments