ಹಾಸನ : ಸಕಲೇಶಪುರ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಕಾರಿನ ಮೇಲೆ ಬಿದ್ದು ಕಾರು ಜಖಂಗೊಂಡಿದೆ.
ಅದೃಷ್ಟವಶಾತ್ ಕರೆಂಟ್ ಇಲ್ಲದ ಸಂದರ್ಭದಲ್ಲಿ ಈ ಕಂಬ ಬಿದ್ದುದರಿಂದ, ಭಾರೀ ಅನಾಹುತ ತಪ್ಪಿದೆ. ಈ ವಿದ್ಯುತ್ ಕಂಬವು ಶಿತಿಲಾವಸ್ಥೆಯಲ್ಲಿ ಇದ್ದುದರಿಂದ ಈ ಘಟನೆ ನಡೆದಿದೆ.
ಗ್ರಾಮದಲ್ಲಿ ಬಟ್ಟೆ ವ್ಯಾಪಾರ ಮಾಡುವ ರಾಜು ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಅವರು ವ್ಯಾಪಾರಕ್ಕೆ ತೆರಳುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಬೇರೆ ಯಾವುದೇ ರೀತಿಯ ಸಮಸ್ಯೆಗಳು ಸಂಭವಿಸಿಲ್ಲ.
ಪಂಚಾಯತಿಯ ಗಮನಕ್ಕೆ ಕಂಬ ಶಿಥಿಲಾವಸ್ಥೆಯಲ್ಲಿರುವ ವಿಷಯ ತಿಳಿಸಿದ್ದರು ಸಹ ಅವರು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.


0 Comments