ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ 10 ಚಕ್ರದ ಲಾರಿಯೊಂದು ಸಿಲುಕಿಕೊಂಡ ಘಟನೆ ನಡೆದಿದೆ.
ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕವಾದ ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಲಾರಿ ಸಿಕ್ಕಿಹಾಕಿಕೊಂಡಿದ್ದು, ಉಳಿದ ಎಲ್ಲಾ ವಾಹನಗಳ ಸಂಚಾರಕ್ಕೆ ಈ ಲಾರಿಯಿಂದಾಗಿ ಅಡಚಣೆ ಉಂಟಾಗಿತ್ತು
ಭಾರಿ ಗಾತ್ರದ ವಾಹನಗಳಿಗೆ ಚಾರ್ಮಾಡಿ ಘಾಟ್ ನಲ್ಲಿ ನಿಷೇಧ ಹೇರಲಾಗಿದೆ. ಆದರೂ ಕೂಡ ಚಾರ್ಮಾಡಿಯ ಚೆಕ್ ಪೋಸ್ಟ್ ದಾಟಿ ಕೆಲವೊಂದು ಸಾರಿ ಬಾರಿ ಗಾತ್ರದ ವಾಹನಗಳು ಬರುತ್ತಿವೆ.
ಲಾರಿಯನ್ನು ಸ್ಥಳದಿಂದ ತೆರವು ಮಾಡಲು ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕ ಸದಸ್ಯ ಜಾವಳಿ ಪರೀಕ್ಷಿತ್ ಮತ್ತು ಉಳಿದ ಪ್ರಯಾಣಿಕರು ಸೇರಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ತನು ಕೊಟ್ಟಿಗೆಹಾರ, ವರದಿಗಾರರು.



0 Comments