ಚಿಕ್ಕಮಗಳೂರು : ಐಪಿಎಲ್ ಆರಂಭವಾಯಿತೆಂದರೆ ಕೆಲವರಿಗೆ ಕ್ರಿಕೆಟ್ ನೋಡುವುದು ಕುಶಿ ಇನ್ನು ಕೆಲವರಿಗೆ ಬೆಟ್ಟಿಂಗ್ ದಂಧೆ ನಡೆಸುವ ಚಟ.
ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರಿನಲ್ಲಿ ಹಾಗೂ ಚಿಕ್ಕಮಗಳೂರು ನಗರದಲ್ಲಿ ಬೆಟ್ಟಿಂಗ್ ಅಡ್ಡೆಯ ಮೇಲೆ ಏಕಕಾಲದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅಪಾರ ಪ್ರಮಾಣದ ಹಣ, ಮೊಬೈಲ್ ಸೇರಿದಂತೆ ಹಲವು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಹಾಗೂ CEN ಪೊಲೀಸರು ನಡೆಸಿದ ಪ್ರತ್ಯೇಕ ಜಂಟಿ ಕಾರ್ಯಾಚರಣೆಯಲ್ಲಿ ಅಪಾರ ಮೌಲ್ಯದ ಹಣ ಹಾಗೂ ಮೊಬೈಲ್ ವಶಪಡೆಯಲಾಗಿದೆ.
ಚಿಕ್ಕಮಗಳೂರು ನಗರದಲ್ಲಿ ಹಾಗೂ ಬಾಳೆಹೊನ್ನೂರಿನಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಗೆ ಬಾಳೆಹೊನ್ನೂರಿನಲ್ಲಿ 10 ಜನ ಹಾಗೂ ರೂ. 17,000/- ನಗದು ವಶ. ಚಿಕ್ಕಮಗಳೂರಿನಲ್ಲಿ 03 ಜನ ಹಾಗೂ ರೂ. 21,000/- ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯು ಇನ್ನೂ ಹಲವಾರು ಆಯಾಮಗಳಲ್ಲಿ ನಡೆಯಲಿದ್ದು ಇನ್ನಷ್ಟು ಆರೋಪಿಗಳ ಸುಳಿವು ಸಿಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.




0 Comments