ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ  ಓರ್ವ ವ್ಯಕ್ತಿಯ ಶವ ಪತ್ತೆಯಾಗಿದೆ.

ಶೃಂಗೇರಿಯ ಗಾಂಧೀ ಮೈದಾನದಲ್ಲಿ ಪತ್ತೆಯಾದ ವ್ಯಕ್ತಿಯ ಜೇಬಿನಲ್ಲಿ ಗುರುತಿನ ಚೀಟಿ ಪತ್ತೆಯಾಗಿದ್ದು ಆ ಆಧಾರದ ಮೇಲೆ ಮೃತ ವ್ಯಕ್ತಿಯನ್ನು ನರಸಿಂಹರಾಜಪುರ ತಾಲೂಕಿನ ಸಂಸೆ ನಿವಾಸಿ 47 ವರ್ಷ ವಯಸ್ಸಿನ ಗಿಡ್ಡಪ್ಪ ಬಿನ್ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಗಿಡ್ಡಪ್ಪ ವೃತ್ತಿಯಲ್ಲಿ ಕೂಲಿ ಮಾಡುತ್ತಿದ್ದ.

ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ  ನಡೆಸಿದ್ದಾರೆ. ಸಾವನ್ನಪ್ಪಲು ಹೃದಯಾಘಾತ ಕಾರಣ ಎಂದು ತಿಳಿದುಬಂದಿದೆ.