ವಿರಾಜಪೇಟೆ : (ನ್ಯೂಸ್ ಮಲ್ನಾಡ್ ವರದಿ)  ಕುಟುಂಬದಲ್ಲಿ ಉಂಟಾದ ಕಲಹದಿಂದ ಮನಸ್ಸಿಗೆ ನೋವುಂಟುಮಾಡಿಕೊಂಡು ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯು ತನ್ನ ಪ್ರಾಣ ಕಳೆದುಕೊಂಡ ಬೇಸರದ ಸಂಗತಿ ಬೆಳಕಿಗೆ ಬಂದಿದೆ.

ಅರ್ವತೊಕ್ಲು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ 28 ವರ್ಷದ ರಮ್ಯಾ  ಎಂಬಾಕೆ ನಾಲ್ಕು ದಿನಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಆಕೆಯನ್ನು ವಿರಾಜಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗೀ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚೇತರಿಕೆ ಕಂಡಿದ್ದ ರಮ್ಯಾಳನ್ನು ನಿನ್ನೆಯಷ್ಟೇ ಮನೆಗೆ ಕರೆ ತರಲಾಗಿತ್ತು, ಆದರೆ ಮನೆಗೆ ಬಂದ ನಂತರ ಏಕಾಏಕಿ ಹೊಟ್ಟೆ ನೋವು ಉಂಟಾದ ಪರಿಣಾಮ ಇಂದು ಮುಂಜಾನೆಯ ವೇಳೆ ಆಕೆ ಕೊನೆ ಉಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. 

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿದು ಬಂದಿದೆ.