ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಉಂಟಾಗಿ ಕಾರು ನಾಲೆಗೆ ಬಿದ್ದ ಘಟನೆ ನಡೆದಿದೆ.

ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ತಿರುವಿನಲ್ಲಿ ಕಾರು ಮತ್ತು ಬೈಕು ಮುಖಾಮುಖಿ ಡಿಕ್ಕಿಯಾಗಿದೆ, ಡಿಕ್ಕಿಯಾದ ತಕ್ಷಣವೇ ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ, ಅದೃಷ್ಟವಶಾತ್ ಯಾವುದೇ ಅಪಾಯಗಳು ಬೈಕ್ ಸವಾರನಿಗೆ ಸಂಭವಿಸಿಲ್ಲ. ಅಪಘಾತದ ನಂತರ ತಪ್ಪಿಸಿಕೊಳ್ಳುವ ಭರದಲ್ಲಿ ಅತೀ ವೇಗದಿಂದ ಕಾರನ್ನು ಚಲಾಯಿಸಿದ ಕಾರಿನ ಚಾಲಕ, ಕಾರನ್ನು ನೇರವಾಗಿ ನಾಲೆಗೆ ಉರುಳಿಸಿದ್ದಾನೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರಿಗೆ ಪ್ರಣಾಪಾಯಗಳು ಉಂಟಾಗಿಲ್ಲ. ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. ನಾಲೆಯಲ್ಲಿ ನೀರು ಇದ್ದುದರಿಂದ ಉಂಟಾಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. 

ಈ ಕುರಿತು ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ತನು ಕೊಟ್ಟಿಗೆಹಾರ, ವರದಿಗಾರರು.