ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಬಜರಂಗದಳದ ಸ್ಥಾಪನ ದಿನದ ಪ್ರಯುಕ್ತ ಇಂದು ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಸ್ಥಾಪನ ದಿನದ ಸಂಭ್ರಮಾಚರಣೆಯನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಚರಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಹಕಾರ್ಯದರ್ಶಿ ರಂಗನಾಥ್ ಬಜರಂಗದಳದ ಹುಟ್ಟು ಸಂಘರ್ಷ ಲವ್ ಜಿಹಾದ್, ಮತಾಂತರ, ಗೋಹತ್ಯೆ ವಿರುದ್ಧವಾಗಿ ಹೋರಾಟ ನಡೆಸಲು ಆಗಿದೆ ಹಾಗೂ ಬಜರಂಗದಳ ಇದೆಲ್ಲದರ ವಿರುದ್ಧ ಸಮರ ಸಾರುತ್ತಲೇ ಬಂದಿದೆ. ಮುಂದಿನ ದಿನಗಳಲ್ಲಿ ಇಂಥಹ ಪ್ರಕರಣಗಳು ನಡೆದಲ್ಲಿ ಬಜರಂಗದಳವು ಸಂಘರ್ಷದಿಂದಲೇ ಪ್ರತ್ಯುತ್ತರ ನೀಡಲಿದೆ ಎಂದರು. 

ನಂತರ ಮಾತನಾಡಿದ ಬಜರಂಗದಳದ ನಗರ ಸಂಯೋಜಕ ಶ್ಯಾಮ್ ವಿ ಗೌಡ, ಶ್ರೀರಾಮನ ರಥಯಾತ್ರೆಯ ರಕ್ಷಣೆಯ ಹೊಣೆಯನ್ನು ಹೊತ್ತು ಹುಟ್ಟಿಕೊಂಡ ಸಂಘರ್ಷದ ಸಂಘಟನೆ ಹಿಂದುತ್ವದ ಏಕೈಕ ಸಂಘಟನೆ ಬಜರಂಗದಳ, ಇದರ ಸ್ಥಾಪನ ದಿನ ಇಂದು. ನಮ್ಮ ಮುಂದೆ ಹಲವು ಸವಾಲುಗಳು ಇದೆ ಇವೆಲ್ಲ ನಮಗೆ ಲೆಕ್ಕವೇ ಅಲ್ಲ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಎಕನಾಮಿಕಲ್ ಜಿಹಾದ್, ಗೋಹತ್ಯೆ, ಮಂದಿರ ಧ್ವಂಸ, ಮತಾಂತರ ಇದರ ವಿರುದ್ಧ ಹೋರಾಟ ಮಾಡುತ್ತಲೇ ಬಜರಂಗದಳದ ಕಾರ್ಯಕರ್ತರು ಬರುತ್ತಿದ್ದೇವೆ, ಇನ್ನು ಮುಂದೆ ಈ ಘಟನೆಗಳು ನಿಲ್ಲದಿದ್ದರೆ ಸಂಘರ್ಷದಿಂದಲೇ ಉತ್ತರ ಕೊಡಬೇಕಾಗುತ್ತದೆ ಸರ್ಕಾರ ಇದರ ಕಡೆ ಗಮನ ಕೊಡದೇ ಇದ್ದಲ್ಲಿ ಮುಂದಿನ ಹೋರಾಟದ ಸ್ವರೂಪ ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎಂದರು.

ಈ ಸಂಭ್ರಮಾಚರಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ಶ್ರೀಕಾಂತ ಪೈ, ಜಿಲ್ಲಾ ಬಜರಂಗದಳದ ವಿದ್ಯಾರ್ಥಿ ಪ್ರಮುಖ್ ಗುರುಕಿರಣ್ ನಗರ ಅಧ್ಯಕ್ಷರಾದ ಶ್ರೀ ಆಟೋ ಶಿವಣ್ಣ ಉಪಾಧ್ಯಕ್ಷರಾದ ದೇವು ನಗರ ಸಹ ಸಂಯೋಜಕ ಮಂಜು ಎಂ.ಜಿ ರೋಡ್ ಹಾಗೂ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು