ಚಿಕ್ಕಮಗಳೂರು : ರಾಮಮಂದಿರದ ವಿಚಾರವಾಗಿ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆಗೆ  ಸಿಟಿ ರವಿ ತಿರುಗೇಟು ನೀಡಿದ್ದಾರೆ.

ಮಂದಿರದ ಕುರಿತಾಗಿ ಮಾತನಾಡುವ ಯಾವುದೇ ನೈತಿಕತೆ ಕುಮಾರ ಸ್ವಾಮಿ ಅವರಿಗಿಲ್ಲ, ಮಂದಿರದ ಹೋರಾಟ, ಚಳುವಳಿಗಳು ನಡೆಯುವಾಗ ಕುಮಾರಸ್ವಾಮಿ ಅವರು ನಮಾಜ್ ಮಾಡುತ್ತಿದ್ದರು ಎಂದರು.

ರಾಮ ಮಂದಿರದ ಯಾವ ಹೋರಾಟಗಳಲ್ಲಿ ನಿಮ್ಮ ಪಾತ್ರವಿತ್ತು ಮಂದಿರದ ದೇಣಿಗೆಯ ಕುರಿತಾಗಿ ಮಾತನಾಡುವ ನೀವು ಎಷ್ಟು ಹಣವನ್ನು ಮಂದಿರದ ನಿರ್ಮಾಣಕ್ಕಾಗಿ ನೀಡಿದ್ದೀರಿ, ಹಣ ನೀಡಿದ್ದರೆ ನಿಮಗೆ ಕೇಳುವ ಹಕ್ಕಿತ್ತು, ಸುಖಾ ಸುಮ್ಮನೆ ನೀವು ಮಾಡುವ ಆರೋಪಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ನೇರವಾಗಿ ದೊರೆಯಲಿದೆ ಎಂದರು.

ಸಂಘ ಪರಿವಾರದ ಕಾರ್ಯಕರ್ತರು ಬಿಜೆಪಿಯವರು ರಾಮ ಮಂದಿರದ ನಿರ್ಮಾಣದ ಕುರಿತಾಗಿ ಮನೆ ಮನೆಗೆ ತೆರಳಿ ವಿಚಾರ ತಿಳಿಸುವಾಗ ನೀವು ಟೋಪಿ ಧರಿಸಿ ನಮಾಜ್ ಮಾಡುತ್ತಿದ್ದಿರಿ ಎಂದು ಕುಮಾರಸ್ವಾಮಿ ಅವರನ್ನು ಕುಟುಕಿದ್ದಾರೆ.

ರಾಮ ಮಂದಿರದ ಹಣವನ್ನು ದುರುಪಯೋಗ ಮಾಡಲು ಅಲ್ಲಿ ಖಾಂದಾನ್ ಇಲ್ಲ ದೇಶಕ್ಕಾಗಿ ತಮ್ಮ ಮನೆಯನ್ನು, ಸರ್ವಸ್ವವನ್ನೂ ಬಿಟ್ಟು ಬಂದಿರುವ ರಾಷ್ಟ್ರ ಪ್ರೇಮಿಗಳೇ ಇರುವುದು ಎಂದರು. ಪ್ರಚಾರದ ತೆವಲಿಗೆ ಈ ರೀತಿಯಾದ ಹೇಳಿಕೆಗಳನ್ನು ನೀಡುವುದನ್ನು ಮೊದಲು ನಿಲ್ಲಿಸಬೇಕು ಎಂದರು.

ತನು ಕೊಟ್ಟಿಗೆಹಾರ, ವರದಿಗಾರರು.