ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನಾದ್ಯಂತ ಕಾಡು ಪ್ರಾಣಿಗಳ ದಾಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನರು ದಿನದಿಂದ ದಿನಕ್ಕೆ ಬಹಳ ಚಿಂತೆಗೀಡಾಗಿದ್ದಾರೆ.

ಶಿವಮೊಗ್ಗದ ಸಾಲಿಗೆರೆಯಲ್ಲಿ ಕೊಟ್ಟಿಗೆಯಲ್ಲಿದ್ದ ಹಸು - ಕರುಗಳ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಪರಿಣಾಮ ದನ ಕರುಗಳು ಸಾವನ್ನಪ್ಪಿದೆ.

ಶಿವಮೊಗ್ಗದ ಉಂಬ್ಳೇಬೈಲು ಸಮೀಪದ ಸಾಲಿಗೆರೆ ಗ್ರಾಮದ ನಿವಾಸಿಗಳಾದ ಕೃಷ್ಣರಾಜ್ ಎಂಬುವವರಿಗೆ ಸೇರಿದ ಹಸು ಕರುಗಳು ಚಿರತೆ ದಾಳಿಯಿಂದ ಸಾವನ್ನಪ್ಪಿದೆ. ಕೊಟ್ಟಿಗೆಯಲ್ಲಿ ರಾತ್ರಿ ಹೊತ್ತು ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಈ ಭಾಗದಲ್ಲಿ ಹಿಂದಿನ ದಿನಗಳಲ್ಲಿ ಕಾಡಾನೆ ದಾಳಿಯು ನಡೆಯುತ್ತಿತ್ತು, ಪ್ರಸ್ತುತ ಚಿರತೆ ದಾಳಿಯು ಸ್ಥಳೀಯರನ್ನು ಹಾಗೂ ಅಲ್ಲಿನ ನಿವಾಸಿಗಳನ್ನು ಭಯಭೀತರನ್ನಾಗಿಸಿದೆ. 

ಕಾಡು ಪ್ರಾಣಿಗಳ ಉಪಟಳ ಈ ಗ್ರಾಮದಲ್ಲಿ ಬಹಳ ಹೆಚ್ಚಾಗುತ್ತಿದ್ದು ಶೀಘ್ರವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಈ ಕೂಡಲೇ ಪ್ರಾಣಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು  ಹಾಗೂ ಜನರಿಗೆ ಹಾಗೂ ಸಾಕು ಪ್ರಾಣಿಗಳಿಗೆ ರಕ್ಷಣೆ ನೀಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.