ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತ ಆಗಿದೆ.
ಜಿಲ್ಲೆಯಾದ್ಯಂತ ತಡರಾತ್ರಿ ಭಾರಿ ಗುಡುಗು, ಮಿಂಚು ಸಹಿತ ಮಳೆ ಸುರಿದಿದ್ದರಿಂದ ನಗರದ ತಗ್ಗು ಪ್ರದೇಶದಲ್ಲಿದ್ದ ಐದಾರು ಮನೆಗಳಿಗೆ ನೀರು ನುಗ್ಗಿದೆ ಇದರ ಪರಿಣಾಮ ಜನರು ಕಂಗಾಲಾಗಿ ಮಧ್ಯರಾತ್ರಿಯವರೆಗೂ ಮನೆಯೊಳಗೆ ತುಂಬಿದ ನೀರನ್ನು ಹೊರಹಾಕುವ ಸ್ಥಿತಿ ಎದುರಾಗಿತ್ತು.
ಜಿಲ್ಲೆಯ ತಗ್ಗು ಪ್ರದೇಶಗಳಾದ ಕೆಂಪನಹಳ್ಳಿ ಮತ್ತು ನೆಹರೂ ನಗರದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದ್ದಾರೆ ಹಾಗೂ ನಗರದ ಒಳಚರಂಡಿ ಬಾಕ್ಸ್ ಕೂಡ ತೆರೆದು ಭಾರಿ ಮಳೆಯಿಂದ ತುಂಬಿ ಅಂಗಡಿಗಳಿಗೆ ಆ ಕೊಳಚೆಯ ನೀರು ನುಗ್ಗಿದೆ.
ಈ ಕಳೆದೆರಡು ದಿನದಿಂದ ಮಲೆನಾಡಿನಾದ್ಯಂತ ಸುರಿಯುತ್ತಿರುವ ಗುಡುಗು ಸಹಿತ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments