ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿರುವ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು  ಆಧಾರ್ ತಿದ್ದುಪಡಿ ಕಾರ್ಯಕ್ರಮ ನಡೆಯಿತು. 

ಈ ಕಾರ್ಯಕ್ರಮದಲ್ಲಿ ಸುಮಾರು 125 ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಆಧಾರ್ ತಿದ್ದುಪಡಿ ಕಾರ್ಯಕ್ರಮ ನಡೆಯಿತು. ಕೊಪ್ಪ  ಅಂಚೆ ಉಪ ವಿಭಾಗದ ಆಶ್ರಯದಲ್ಲಿ ಈ ಕಾರ್ಯಕ್ರಮದ ಆಯೋಜನೆ ನೆರವೇರಿತು ಎಂಬ ಮಾಹಿತಿ ದೊರೆತಿದೆ.

 ಅಂಚೆ ನಿರೀಕ್ಷಕರಾದ ಶ್ರೀ ಕುಮಾರ್, ಅಂಚೆ ಮೇಲ್ವಿಚಾರಕರಾದ ಶ್ರೀಮತಿ ಅಶ್ವಿನಿ, ಜೆ ಆರ್ ಶ್ರೀ ವಿನಯ್ ಶೇಟ್, ಸಿಸ್ಟಮ್ ಅಡ್ಮಿನ್ ಶ್ರೀ ಚಂದ್ರು, ಸಹಾಯಕರಾಗಿ ಶ್ರೀ ರಘುಪತಿ ಶ್ರೀ ರಘು ಶ್ರೀಮತಿ ಆಶಾ ,ಕುಮಾರಿ ಸಿಂಚನ ಶ್ರೀ ನವೀನ್ ಶ್ರೀಮತಿ ಮಾಲಿನಿ ಮಸಿಗೆ ಅಂಚೆ ಪಾಲಕರಾದ ಶ್ರೀ ಬಾಲಕೃಷ್ಣ ಪೋಸ್ಟ್ ಮನ್ ಶ್ರೀ ಆದಿತ್ಯ , ಕಾರ್ಯನಿರ್ವಹಿಸಿರುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಯುತ ಉದಯ್ ಕುಮಾರ್ ಅವರು ಹಾಗೂ ಶಾಲೆಯ ಎಲ್ಲ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.