ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ದೇವಿರಮ್ಮ ದೇವಾಲಯದ ಜಾತ್ರೆಯ ದಿನಾಂಕ ಹಾಗೂ ಜಾತ್ರೆಯ ಕೆಲವು ನಿಬಂಧನೆಗಳು ಇಂದು ನಿಗದಿಯಾಗಿದೆ.
ಈ ಬಾರಿಯ ಜಾತ್ರೆಯನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ತಿಳಿಸಿದ್ದಾರೆ. ದೀಪೋತ್ಸವ ವನ್ನು ನವೆಂಬರ್ 03 ರಿಂದ 06 ನೆ ತಾರೀಖಿನ ವರೆಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಬೆಟ್ಟ ಹತ್ತುವವರ ಸಂಖ್ಯೆಗೂ ನಿಬಂಧನೆ :
ಸಾರ್ವಜನಿಕರ ಹಾಗೂ ಊರಿನ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದೇವಿರಮ್ಮ ಬೆಟ್ಟವನ್ನು ಹತ್ತುವ ಜನರ ಸಂಖ್ಯೆಯನ್ನು ಕಡಿಮೆಗೊಳಿಸಲಾಗುವುದು ಹಾಗೂ ಬೆಟ್ಟದ ಮೇಲೆ ಈ ಹಿಂದೆ ನಡೆಸುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲೂ ಬದಲಾವಣೆ ಇದೆ ಪ್ರತಿಯೊಂದಕ್ಕೂ ಒಂದು ಚೌಕಟ್ಟಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಬೆಟ್ಟ ಹತ್ತಲು ಬೇಕು ಪಾಸ್ :
ಈ ಬಾರಿ ದೇವಿರಮ್ಮ ಬೆಟ್ಟವನ್ನು ಹತ್ತಲು ಪ್ರತೀ ಗ್ರಾಮಗಳಿಗೆ ಪಾಸನ್ನು ಕಲ್ಪಿಸಲಾಗಿದೆ, ಪಾಸ್ ಇದ್ದರೆ ಮಾತ್ರ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಹೊರತಾಗಿ ಈ ಜಾತ್ರೆಯ ಸಮಯದಲ್ಲಿ ಬೇರೆಡೆಯಿಂದ ಬಂದ ಪ್ರವಾಸಿಗರು ಸುತ್ತ ಮುತ್ತಲಿನ ಹೋಂ ಸ್ಟೇ ಗಳಲ್ಲಿ ತಂಗುವುದನ್ನು ನಿಷೇಧ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ರೂಪಾ, ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್, ಉಪವಿಭಾಗಾಧಿಕಾರಿ ಡಾ. ನಾಗರಾಜ್, ತಹಶೀಲ್ದಾರ್ ಕಾಂತರಾಜ್ ಹಾಗೂ ದೇವಸ್ಥಾನ ಮಂಡಳಿಯ ಕಮಿಟಿ ಸದಸ್ಯರು ಹಾಜರಿದ್ದರು.

0 Comments